ಕಂಪ್ಲಿ ತಾಲೂಕಿನ ಎಮ್ಮಿಗನೂರಿನಲ್ಲಿ ಎಪಿಎಂಸಿ ಉಪ ಮಾರುಕಟ್ಟೆ ಆರಂಭ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ಜೆ.ಎನ್.ಗಣೇಶ್‌ಗೆ ಪ್ರಾಕೃಪ ಸಂಘದ ಆಡಳಿತ ಮಂಡಳಿ ಹಾಗೂ ರೈತರಿಂದ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಬಿ.ಖಾಸಿಂಸಾಬ್, ಎಸ್.ಅಲ್ಲಾಸಾಬ್, ಎಚ್.ಜೆ.ಶಾರದಾ, ಎನ್.ಹಬೀಬ್ ರೆಹಮಾನ್, ಬೇರ‌್ಗಿ ಮಹೇಶಗೌಡ ಇತರರಿದ್ದರು. 
ಜಿಲ್ಲೆ

ಎಪಿಎಂಸಿ ದಲ್ಲಾಳಿಗಳ ವಿರುದ್ಧ ಕ್ರಮ

ಗಾಯತ್ರಿ ಮಾಲಿಪಾಟೀಲ್

ಕಂಪ್ಲಿ: ಎಮ್ಮಿಗನೂರಿನ ಎಪಿಎಂಸಿಯನ್ನು ಕಂಪ್ಲಿಯ ಉಪ ಮಾರುಕಟ್ಟೆಯನ್ನಾಗಿ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಇದನ್ನೂ ಓದಿ:

ಎಮ್ಮಿಗನೂರು ಎಪಿಎಂಸಿ ಆವರಣದಲ್ಲಿ ಗುರುವಾರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. 2024-25ನೇ ಸಾಲಿನಲ್ಲಿ ಎಮ್ಮಿಗನೂರು ಸೊಸೈಟಿ ಮೂಲಕ 1128 ರೈತರಿಂದ 74,162 ಕ್ವಿಂಟಾಲ್ ಜೋಳ ಖರೀದಿಸಿದ್ದು, ಶೇ.90 ರೈತರಿಗೆ ಡಿಬಿಟಿ ಮೂಲಕ ಹಣ ಜಮಾ ಮಾಡಲಾಗಿದೆ. ಹೊರ ರಾಜ್ಯಗಳ ಜೋಳ ಖರೀದಿಸಿ ಅನಧಿಕೃತ ಮಾರಾಟ ಮಾಡಿ ಇಲ್ಲಿನ ರೈತರಿಗೆ ತೊಂದರೆ ಉಂಟುಮಾಡುವ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಖಾಸಿಂಸಾಬ್ ಮಾತನಾಡಿ, ಎಮ್ಮಿಗನೂರಿನಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಿದ್ದರಿಂದ ರೈತರಿಗೆ ಅನುಕೂಲವಾಗಿದೆ. ಗ್ರಾಮದ ಎಪಿಎಂಸಿಯಲ್ಲಿ ಸಿಸಿ ರಸ್ತೆ, ಶೌಚಗೃಹ, ವೇಬ್ರಿಡ್ಜ್, ಮಳೆ-ಬಿಸಿಲಿನಿಂದ ರಕ್ಷಣೆಗಾಗಿ ತಗಡಿನ ಶೆಡ್, ಆವರಣ ಗೋಡೆ, ಸಂಸ್ಕರಣಾ ಘಟಕ, ಧಾನ್ಯ ಶೇಖರಣೆಗೆ 2500 ಎಂ.ಟಿ ಸಾಮರ್ಥ್ಯದ ಗೋದಾಮು ನಿರ್ಮಾಣ ಮಾಡಬೇಕು. ಮುಂದಿನ ವರ್ಷ ಒಂದು ಎಕರೆಗೆ 20 ಕ್ವಿಂಟಾಲ್ ಜೋಳ ಖರೀದಿಸಲು ಅವಕಾಶ ನೀಡಬೇಕೆಂದು ಕೋರಿದರು.

ಸೊಸೈಟಿ ಉಪಾಧ್ಯಕ್ಷ ಎಸ್.ಅಲ್ಲಾಸಾಬ್, ಗ್ರಾಪಂ ಅಧ್ಯಕ್ಷೆ ಎಚ್.ಜೆ.ಶಾರದಾ, ಉಪಾಧ್ಯಕ್ಷ ದೊಡ್ಡ ಗಾದಿಲಿಂಗಪ್ಪ, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಜಿಲ್ಲಾ ವ್ಯವಸ್ಥಾಪಕ ಶಿವಬಸವರಾಜ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಪ್ರಮುಖರಾದ ಬೇರ‌್ಗಿ ಮಹೇಶಗೌಡ, ಬಿ.ಸದಾಶಿವಪ್ಪ, ಕೆ.ಕಾಸೀಮ್‌ಸಾಬ್, ವಿ.ವೀರೇಶ್, ಹೊನ್ನಳ್ಳಿ ಗಂಗಾಧರ, ಸಣ್ಣ ಜಡೆಪ್ಪ, ಜೀರ್ ಉಮೇಶ ಇತರರಿದ್ದರು.