ಜಿಲ್ಲೆ

ಯುವಕರಿಗೆ ಅಭಿನಯ ಕಾರ್ಯಾಗಾರ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಸುನಿಧಿ ಕಲಾ ಸೌರಭ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಒಂದು ವಾರದ ಅಭಿನಯ ಕಾರ್ಯಾಗಾರವನ್ನು ಅ. 22ರಿಂದ 28ರ ವರೆಗೆ ಆಯೋಜಿಸಿದೆ.

ನಗರದ ದೇವಾಂಗಪೇಟೆ ರಸ್ತೆಯ ರಾಜಾಜಿನಗರದ ಚೈತನ್ಯ ಧಾಮದಲ್ಲಿ ನಿತ್ಯ ಸಂಜೆ 4ಕ್ಕೆ ಕಾರ್ಯಾಗಾರ ನಡೆಯಲಿದೆ.

ಹಿರಿಯ ರಂಗ ಕಲಾವಿದ ಲಕ್ಷ್ಮಣರಾವ್ ಓಕ್ ಅವರು ಕಾರ್ಯಾಗಾರ ಉದ್ಘಾಟಿಸುವರು. ಸ್ವಾತಿ ಪಟ್ಟೇದ ಹಾಗೂ ಮಂಗಲಾ ನಾಡಕರ್ಣಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಧಾರವಾಡ ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಧ್ಯಕ್ಷತೆ ವಹಿಸುವರು.

ಸುನಿಧಿ ಕಲಾ ಸೌರಭ ಕಳೆದ 22 ವರ್ಷಗಳಿಂದ ರಂಗಭೂಮಿ, ಜಾನಪದ, ಸಾಹಿತ್ಯ, ಶಿಕ್ಷಣ, ಪರಿಸರ, ಮುಂತಾದ ರಂಗಗಳಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿದೆ. ಅಭಿನಯ ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತರು ಕಲಾ ಸೌರಭದ ಕಾರ್ಯದರ್ಶಿ ವೀಣಾ ಅಠವಲೆ ಅವರನ್ನು ಸಂಪಕಿರ್ಸಲು ಕೋರಲಾಗಿದೆ.