ಜಿಲ್ಲೆ

ಸೇವಾ ಭಾವದಿಂದ ಕಾರ್ಯನಿರ್ವಹಿಸಲಿ

ವೀರೇಶ ಸೌದ್ರಿ

ಸಿದ್ದಾಪುರ: ಜವಾಬ್ದಾರಿಯುತ ನಡೆಯೊಂದಿಗೆ ಸೇವಾ ಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಲಯನ್ಸ್ ಅಂತಾರಾಷ್ಟ್ರೀಯ ಜಿಎಟಿ ಸಂಚಾಲಕ ಕೆ. ದೇವೇಗೌಡ ಹೇಳಿದರು.

ಮುರುಘರಾಜೇಂದ್ರ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಕೆನರಾ ಲಯನ್ಸ್ ಫೋರಮ್ ವತಿಯಿಂದ ಕ್ಲಬ್ ಗುಣಮಟ್ಟ ಸುಧಾರಣೆ ಹಾಗೂ ನಾಯಕತ್ವ ಬೆಳವಣಿಗೆ ಕುರಿತು ಆಯೋಜಿಸಿದ್ದ ಒಂದು ದಿನದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಫೋರಮ್ ಅಧ್ಯಕ್ಷ ಡಾ. ರವಿ ಹೆಗಡೆ ಹೂವಿನಮನೆ ಮಾತನಾಡಿ, ಕೆನರಾ ಲಯನ್ಸ್ ಫೋರಮ್ ಅತ್ಯುತ್ತಮವಾದ ತಿಳಿವಳಿಕೆ ಹಾಗೂ ನಾಯಕತ್ವದ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಜಾಗತಿಕ ಮಟ್ಟದಲ್ಲಿ ಸಮೂಹವನ್ನು ಬಲಗೊಳಿಸುವ ಪ್ರಕ್ರಿಯೆಗೆ ಸಹಕರಿಸುತ್ತಿದೆ ಎಂದರು.

ಬಹುಜಿಲ್ಲೆಗಳ ಒಕ್ಕೂಟದ ಜಿಎಲ್​ಟಿ ಸಂಚಾಲಕ ವಸಂತಕುಮಾರ್ ಶೆಟ್ಟಿ , ಎಲ್​ಸಿಐಎಫ್ ಸಂಚಾಲಕ ಸಂಜೀತ್ ಶೆಟ್ಟಿ, ಫೋರಮ್ ಕೋಶಾಧ್ಯಕ್ಷ ಡಾ. ಗಿರೀಶ್ ಕುಚ್ಚಿನಾಡ್, ಪ್ರಾದೇಶಿಕ ಅಧ್ಯಕ್ಷ ಆರ್.ಎಚ್. ನಾಯ್ಕ, ಜಿಎಲ್​ಟಿ ಸಂಚಾಲಕ ಸುದೇಶ ಬೋರ್​ಕರ್ ಮಾತನಾಡಿದರು. ವಲಯ ಅಧ್ಯಕ್ಷೆ ಶಾಮಲಾ ಹೆಗಡೆ ಹೂವಿನಮನೆ ಸ್ವಾಗತಿಸಿದರು. ಆಕಾಶ ಹೆಗಡೆ ಗುಂಜಗೋಡ ಧ್ವಜ ವಂದನೆ ನೆರವೇರಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು. ಕುಮಾರ ಗೌಡರ್ ಹೊಸೂರು ವಂದಿಸಿದರು.

ವಿನಯಾ ನಾಯಕ, ಶಾಮಲಾ ಹೆಗಡೆ ಹೂವಿನಮನೆ, ಅಶೋಕ ಹೆಗಡೆ ಶಿರಸಿ ನಾಯಕತ್ವದಲ್ಲಿ ವಲಯಮಟ್ಟದ ಸಭೆ ನಡೆಯಿತು.