ಜಿಲ್ಲೆ

ಹಿರೇಕುಂಬಿ ಬಳಿ ರಸ್ತೆ ಅಪಘಾತ; ಇಬ್ಬರು ಸಾವು

ಮಂಜುನಾಥ ಕೋಳಿಗುಡ್ಡ

ಬೆಳಗಾವಿ : ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮ ಬಳಿ ಶುಕ್ರವಾರ ನಡೆದ ಎರಡು ದ್ವಿಚಕ್ರ ವಾಹಗಳ ನಡುವಿನ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ.

ಹಂಚಿನಾಳ ಗ್ರಾಮದ ಯಲ್ಲಪ್ಪ ಕರವಿನಕೊಪ್ಪ (46), ಸವದತ್ತಿ ಪಟ್ಟಣದ ಬಸವರಾಜ ಪ್ರಭುನವರ (48) ಮೃತಪಟ್ಟಿದ್ದು, ಹಿಂಬದಿ ಸವಾರರಾದ ಅನಿಲ ದೇಸಾಯಿ ಮತ್ತು ಕವಿತಾ ಕರವಿನಕೊಪ್ಪ ಗಾಯಗೊಂಡಿದ್ದಾರೆ.

ಶುಕ್ರವಾರ ಸಂಜೆ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಸವದತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸವದತ್ತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

.....