05 ಎಚ್ ಎನ್ ಪಿ 1: ಹೊಳೆನರಸೀಪುರ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರವನ್ನು ರೋಟರಿ ಸಂಸ್ಥೆಯ ನಿಯೋಜಿತ ಪ್ರಾಂತಪಾಲ ಪಾಲಾಕ್ಷ ಉದ್ಘಾಟಿಸಿದರು. ಆಶಾ ಜ್ಯೋತಿ, ದೇವರಾಜ್, ನಿರ್ಮಲ್ ಕುಮಾರ್ ಜೈನ್, ಸಂತೋಷಕುಮಾರ್, ಲೋಕೇಶ್, ಕೃಷ್ಣಮೂರ್ತಿ ಮತ್ತಿತರರಿದ್ದರು. 
ಜಿಲ್ಲೆ

ಕೆಲಸ ಗಿಟ್ಟಿಸಲು ಅಗತ್ಯ ಕೌಶಲ ರೂಢಿಸಿಕೊಳ್ಳಿ

Mysuru - Desk - Ravikumar

ಹೊಳೆನರಸೀಪುರ: ವಾರ್ಷಿಕ ಪದವಿ ಹಾಗೂ ಸ್ನಾತಕೋತರ ಪದವಿ ಮುಗಿಸಿ ಬರುವ ಶೇ.20ರಷ್ಟು ಪದವೀಧರರಿಗೆ ಮಾತ್ರ ಸರ್ಕಾರ ಕೆಲಸ ನೀಡಲು ಸಾಧ್ಯ. ಉಳಿದ ಶೇ.80 ರಷ್ಟು ಉದ್ಯೋಗವನ್ನು ಖಾಸಗಿ ಕಂಪನಿಗಳು ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ಕ್ಷೇತ್ರ ಉದ್ಯೋಗ ಗಿಟ್ಟಿಸಲು ವಿದ್ಯಾರ್ಥಿಗಳು ಅಗತ್ಯ ಕೌಶಗಳನ್ನು ಬೆಳೆಸಿಕೊಳ್ಳಬೇಕು ಎಂದು ರೋಟರಿ ನಿಯೋಜಿತ ಪ್ರಾಂತಪಾಲ ಪಾಲಾಕ್ಷ ಹೇಳಿದರು.

ರೋಟರಿ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಪಟ್ಟಣದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಕಂಪನಿಗಳು ನೀವು ಗಳಿಸಿದ ಹೆಚ್ಚು ಮಾರ್ಕ್ಸ್ ನೋಡುವುದಿಲ್ಲ. ನಿಮ್ಮಲ್ಲಿ ಭಾಷೆ ಹಾಗೂ ಸಂವಹನ ಕೌಶಲ ಎಷ್ಟಿದೆ ಎಂಬುದನ್ನು ಪರಿಗಣಿಸಿ ಉದ್ಯೋಗ ನೀಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಅಗತ್ಯ ಕೌಶಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಸಂಯೋಜಕ ಕೃಷ್ಣಮೂರ್ತಿ ಮಾತನಾಡಿ, ಹಿಂದೆ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಿತ್ತು. ಪದವಿ ಪಡೆದವರಿಗೆಲ್ಲಾ ಸರ್ಕಾರಿ ಕೆಲಸ ಸಿಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಪ್ರತೀವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಪಡೆಯುತ್ತಾರೆ. ಆದರೆ ಕೆಲವು ಸಾವಿರದಷ್ಟು ಉದ್ಯೋಗ ಇರುತ್ತದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ದೊರಕಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಲೇಬೇಕು. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ವಾರದಲ್ಲಿ 2 ದಿನ ರೋಟರಿ ಸಂಸ್ಥೆ ಸಹಯೋಗದಲ್ಲಿ ತರಬೇತಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ. ಓದುವುದನ್ನು ಉತ್ತೇಜಿಸಲು ನಮ್ಮ ವಿದ್ಯಾರ್ಥಿನಿಯರಿಗೆ ಸಾಹಿತ್ಯದ ಪುಸ್ತಕಗಳನ್ನ ನೀಡಿ ಅದನ್ನು ಒಂದು ವಾರದಲ್ಲಿ ಓದಿ ಮುಗಿಸಿದರೆ 50 ರೂ.ಗಳನ್ನು ನೀಡುತ್ತೇವೆ ಎಂದರು.

ಪಿಡಿಒ ಸಂತೋಷ್ ಹಾಗೂ ರೋಟರಿ ಸಹಾಯಕ ಪ್ರಾಂತಪಾಲ ನಿರ್ಮಲ್ ಕುಮಾರ್ ಜೈನ್, ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಪ್ರಾಂಶುಪಾಲ ದೇವರಾಜ್ ಮಾತನಾಡಿದರು. ಪ್ರಾಂಶುಪಾಲೆ ಆಶಾಜ್ಯೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರದನಹಳ್ಳಿ ಕಾಲೇಜಿನ ಪ್ರಾಂಶುಪಾಲ ಲೊಕೇಶ್, ರೋಟರಿ ಸಂಸ್ಥೆ ಅಧ್ಯಕ್ಷ ಸಂತೋಷ್ ಕುಮಾರ್ ಭಾಗವಹಿಸಿದ್ದರು. ಲಕ್ಷ್ಮೀ ಕಾರ್ಯಕ್ರಮಕ್ಕೆ ಶುಭ ಕೋರಿದರು. ಮಹಿಮಾ, ಸುನಿತಾ, ರೇಖಾ ಮತ್ತಿತರರಿದ್ದರು.