ನಂದಗುಡಿ : ಭಗವಂತನು ಸರ್ವಾಂತರ್ಯಾಮಿ. ಹಣಕ್ಕಿಂತ ಭಕ್ತಿ ಮಾರ್ಗದಿಂದ ಜ್ಞಾನ ಗಳಿಸಬಹುದು ಎಂದು ಶ್ರೀಅಭಯ ಶನೇಶ್ವರ ೇತ್ರದ ಸಂಸ್ಥಾಪಕ ಶ್ರೀ ಡಾ.ಡಿ.ಎಲ್.ವೀರಬ್ರಹ್ಮಾಚಾರ್ ಗುರೂಜಿ ತಿಳಿಸಿದರು.
ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿಯಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಆಯೋಜಿಸಿದ್ದ 18ನೇ ಶ್ರೀಲಕ್ಷಿ$್ಮ ಸತ್ಯನಾರಾಯಣಸ್ವಾಮಿ ವ್ರತಚಾರಣೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಮನುಷ್ಯನಿಗೆ ಆಸ್ತಿ, ಅಂತಸ್ತು ಗಳಿಸುವುದೇ ಧ್ಯೇಯವಾಗಿದೆ. ಮನುಷ್ಯನಾಗಿ ಬಾಳುವದನ್ನು ಮರೆತು ಯಾಂತ್ರಿಕ ಜೀವನ ಸಾಗಿಸುವಂತಾಗಿದೆ. ಮನುಷ್ಯನ ಬದುಕು ದುಸ್ತರವಾಗಿ ಸಮಾಜದ ವ್ಯವಸ್ಥೆಗೆ ಹೊಂದಿಕೊಳ್ಳದೆ ಜರ್ಜರಿತನಾಗಿದ್ದು, ಮನಸ್ಸು ಅಶಾಂತಿಯಿಂದ ಕೂಡಿದೆ ಎಂದರು. ಉದ್ಯಮಿಗಳಾದ ಕೃಷ್ಣಾರೆಡ್ಡಿ, ನಾಗೇಂದ್ರಗೌಡ, ಕಮ್ಮನಹಳ್ಳಿ ಕೃಷ್ಣ, ಲೋಕೇಶ್, ಪ್ರಶಾಂತ್ ಗ್ರಾಪಂ ಸದಸ್ಯರಾದ ಕೋಟಿ ನಾರಾಯಣಸ್ವಾಮಿ, ಅಭಿಷೇಕ್, ಗುತ್ತಿಗೆದಾರ ವಾಬಸಂದ್ರ ನಾಗೇಶ್, ಪ್ರಕಾಶ್, ಮರಿಯಪ್ಪ, ಧನುಷ್, ನ್ಯಾನಮೂರ್ತಪ್ಪ, ಬಸವರಾಜು ಹಾಗೂ ರವಿಸುತ ಸೇವಾ ಟ್ರಸ್ಟ್ ಪದಾಧಿಕಾರಿಗಳು ಇದ್ದರು.
ಅಹಂಕಾರ ತೊರೆದಾಗ ಭಗವಂತ ಕರುಣೆ : ಅಹಂಕಾರ ತೊರೆದಾಗ ಭಗವಂತ ಲ ಕರುಣಿಸುತ್ತಾನೆ. ಸಮಾಜದ ಪ್ರತಿಯೊಬ್ಬರೂ ಮಾನವೀಯ ಮೌಲ್ಯ ಬೆಳೆಸಿಕೊಂಡು ಜೀವನ ಸಾಗಿಸಬೇಕು ಎಂದು ಮನೋಹರ ಶಾಸಿ ತಿಳಿಸಿದರು. ಹೊಸಕೋಟೆ ತಾಲೂಕಿನ ನಂದಗುಡಿಯ ಶಿರಡಿ ಶ್ರೀಸಾಯಿಬಾಬಾ ದೇವಾಲಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಶ್ರೀಲಕ್ಷ್ಮೀ ಸಹಿತ ಸತ್ಯನಾರಾಯಣಸ್ವಾಮಿ ವ್ರತಾಚರಣೆಯಲ್ಲಿ ಮಾತನಾಡಿದ ಅವರು, ಮಾನವ ಪರಾವಲಂಬಿಯಾಗದೆ ಪ್ರಾಮಾಣಿಕತೆಯಿಂದ ಕಾಯಕದಲ್ಲಿ ತೊಡಗಿದರೆ ಸುಭದ್ರ ಸಮಾಜ ನಿರ್ಮಾಣ ಮಾಡಬಹುದು. ಸಂತೋಷ, ಪ್ರೀತಿ, ಕರುಣೆಯಲ್ಲಿ ದೇವರನ್ನು ಕಾಣಬೇಕು ಎಂದರು. ಶ್ರೀಸಾಯಿಬಾಬಾಗೆ ವಿವಿಧ ಹೋಮ, ಅಭಿಷೇಕ ಸೇರಿ ಶ್ರೀಲಕ್ಷ್ಮೀ ಸಹಿತ ಸತ್ಯನಾರಾಯಣಸ್ವಾಮಿ ವ್ರತಾಚರಣೆಯೊಂದಿಗೆ ಮಹಾಮಂಗಳಾರತಿ ಮಾಡಲಾಯಿತು. ಸ್ಥಳಿಯರಾದ ಸಂಜಯ್, ನಾಗಭೂಷಣ್, ಶಿವರಾಜ್, ಶ್ರೀಕಂಠಪ್ಪ, ಸಿದ್ದಲಿಂಗಪ್ಪ, ಚಂದ್ರಶೇಖರ್, ಬಸಣ್ಣ, ನವೀನ್, ಬಾಬು, ವಿಶ್ವಾಸ್, ತೇಜಸ್, ಶ್ರೀಸಿದ್ದೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಇದ್ದರು.