ಜಿಲ್ಲೆ

ರೌಡಿಶೀಟರ್‌ಗಳಿಗೆ ಎಸಿಪಿ ಖಡಕ್ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ವಿದ್ಯಾಗಿರಿ, ಉಪನಗರ ಹಾಗೂ ಶಹರ ಠಾಣೆಗಳ ವ್ಯಾಪ್ತಿಯ ರೌಡಿಶೀಟರ್‌ಗಳಿಗೆ ಎಸಿಪಿ ಪ್ರಶಾಂತ ಸಿದ್ದನಗೌಡರ ಭಾನುವಾರ ಖಡಕ್ ಎಚ್ಚರಿಕೆ ನೀಡಿದರು.

ರಾತ್ರಿಯಾಗುತ್ತಲೆ ಸುಮ್ಮನೆ ಮನೆ ಸೇರಬೇಕು. ಬೇಕಾಬಿಟ್ಟಿ ತಿರುಗಾಡುವುದು, ಗುಂಪು ಕಟ್ಟಿಕೊಂಡು ನಿಲ್ಲುವುದು, ಕಾನೂನು ವಿರೋಽ ಚಟುವಟಿಕೆ ಮಾಡಿದರೆ ಕ್ರಮ ಖಚಿತ. ನಿಮ್ಮನ್ನು ಓದಿಸಿ, ದೊಡ್ಡವರನ್ನಾಗಿ ಮಾಡಿದ ಪಾಲಕರ ಶ್ರಮ ಅರಿತುಕೊಳ್ಳಿ. ವಿದ್ಯಾರ್ಥಿ ಜೀವನದಲ್ಲಿ ಅಪರಾಧ ಚಟುವಟಿಕೆ ಮಾಡಿದರೆ ಮುಂದೆ ನೌಕರಿ ಸಿಗುವುದು ಕಠಿಣ ಎಂದು ಎಸಿಪಿ ಕಿವಿಮಾತು ಹೇಳಿದರು.

ಇನ್‌ಸ್ಪೆಕ್ಟರ್‌ಗಳಾದ ದಯಾನಂದ ಶೇಗುಣಸಿ, ನಾಗೇಶ ಕಾಡದೇವರ, ಸಂಗಮೇಶ ದಿಡಿಗಿನಾಳ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.