ಜಿಲ್ಲೆ

ಅರಿವಿಗಿದೆ ಎಲ್ಲ ಕಾಲದಲ್ಲೂ ಮನ್ನಣೆ,ಅಗಸನಕಟ್ಟೆ

Chitradurga

ಚಿತ್ರದುರ್ಗ: ಭಾರತದ ಅನೇಕ ಮಹನೀಯರ ಸಾಧನೆಗೆ ಜ್ಞಾನ ಕಾರಣವೇ ಹೊರತು ಹಣವಲ್ಲ. ಅರಿವನ್ನು ಗಳಿಸಿದವರಿಗೆ ಜಗತ್ತು ಎಲ್ಲ ಕಾಲದ ಲ್ಲೂ ಮನ್ನಣೆ ನೀಡುತ್ತದೆ ಎಂದು ಸಾಹಿತಿ ಲೋಕೇಶ್ ಅಗಸನಕಟ್ಟೆ ಹೇಳಿದರು. ನಗರದ ಶ್ರೀ ಕೃಷ್ಣ ರಾಜೇಂದ್ರ ನಗರ ಕೇಂದ್ರ ಗ್ರಂಥಾಲ ಯದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನಾ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿ,ಅರಿವು ನಮ್ಮನ್ನು ಗುರುವಾಗಿಸುತ್ತದೆ.

ಜ್ಞಾನದ ವಿಸ್ತಾರಕ್ಕೆ ಓದು ಅಗತ್ಯ. ಉತ್ತಮ ಪುಸ್ತಕಗಳು ಆತ್ಮ ಸುಖದೊಂದಿಗೆ ನಮ್ಮೊಳಗಿನ ತಿಳಿವಳಿಕೆ ವೃದ್ಧಿಸಿ ಉತ್ತಮ ಬದುಕು ರೂಪಿ ಸುತ್ತವೆ.ಬದುಕು ಸರಳವೆಂದು ಭಾವಿಸಿರುವುದರಿಂದ ಪರಿಗಣಿಸಿ,ಹೆಣ್ಣು,ಹೊನ್ನು,ಮಣ್ಣನ್ನು ಬೆನ್ನು ಹತ್ತಿದ್ದೇವೆ ವಿನಾ,ಜ್ಞಾನದ ಹಿಂದೆ ಹೋ ಗುತ್ತಿಲ್ಲ. ಜ್ಞಾನದ ಬಲದಿಂದ ಅಜ್ಞಾನದ ಕೇಡು ಎಂಬ ಘೋಷವಾಕ್ಯ,ಅರಿವಿನ ಮಹತ್ವವನ್ನು ಸಾರುತ್ತದೆ. ಈ ನಿಟ್ಟಿನಲ್ಲಿ ಗ್ರಂಥಾಲಯಗಳ ಕೊಡುಗೆ ಬಹಳ ದೊಡ್ಡದೆಂದರು.

ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ ಮಾತನಾಡಿ,ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ. ಕನ್ನಡವನ್ನು ಸ್ಪಷ್ಟವಾಗಿ ಬಳಸುವವರು ವಿರಳವಾಗಿದ್ದಾರೆ ಎಂದು ವಿಷಾದಿಸಿದರು. ಲೇಖಕ ಆನಂದ ಕುಮಾರ್ ಮಾತನಾಡಿ,ನಗರ ಕೇಂದ್ರ ಗ್ರಂಥಾಲಯದಲ್ಲಿ ಮನೆ ವಾತಾವರಣವಿದೆ ಎಂದರು.

ಜಿಲ್ಲಾ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ಮಾತನಾಡಿದರು.ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕ ಟೇಶ್ ಅವರು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ,ಮಕ್ಕಳ ಗ್ರಂಥಾಲಯ,ಪುಸ್ತಕ ಪ್ರದರ್ಶನ ಹಾಗೂ ಓದುವ ಹೊರಾಂಗಣ ವಿಭಾಗ ವನ್ನು ಉದ್ಘಾಟಿಸಿದರು. ಕುಡಾ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ,ನಗರ ಗ್ರಂಥಾಲಯದ ಮುಖ್ಯಗ್ರಂಥಾಲಯಾಧಿಕಾರಿ ಕೊಳ್ಳಿ ಬಸವ ರಾಜ,ನಿವೃತ್ತ ಗ್ರಂಥಪಾಲಕ ಕೃಷ್ಣಮೂರ್ತಿ,ಗ್ರಂಥಪಾಲಕ ಬಿ.ಮೋಹನ್‌ದಾಸ್ ಮತ್ತಿತರರು ಇದ್ದರು.

ಕೋಟ್

ಒಂದು ಪುಸ್ತಕ ನೂರು ಒಳ್ಳೆಯ ಸ್ನೇಹಿತರಿಗೆ ಸಮ. ಸಾಮಾಜಿಕ ಜಾಲತಾಣಗಳಲ್ಲಿ ಕಾಲವ್ಯರ್ಥ ಮಾಡದೆ ಉತ್ತಮ ಪುಸ್ತುಗಳನ್ನು ಓದ ಬೇಕು. ಗ್ರಂಥಾಲಯದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಕೃತಿಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳ ಬೇಕು.

ಜಿ.ಟಿ.ಸುರೇಶ್ ಸಿದ್ದಾಪುರ,ಕುಡಾ ಅಧ್ಯಕ್ಷ,ಚಿತ್ರದುರ್ಗ.

----