ಗದಗ:
ಸಾರಿಗೆ ಸಂಸ್ಥೆಯ ಬಸ್ ಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ತಂದೆ ಮತ್ತು ಮಗ ಸಾವನ್ನಪ್ಪಿದ ಟನೆ ಗುರುವಾರ ತಾಲೂಕಿನ ಲಕ್ಕುಂಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ. ಮೃತರನ್ನು ಹೊಸಪೇಟೆ ನಿವಾಸಿಗಳಾದ ಬಾಲರಾಜ(85) ಹಾಗೂ ವಿನಯ್(28) ಎಂದು ಗುರುತಿಸಲಾಗಿದೆ.
ಸಾರಿಗೆ ಬಸ್ ಲಕ್ಕುಂಡಿ ಮಾರ್ಗವಾಗಿ ಗದಗದಿಂದ ಕೊಪ್ಪಳ್ಳಕ್ಕೆ ಹೊರಟಿತ್ತು. ಕೊಪ್ಪಳದಿಂದ ಹುಬ್ಬಳಿಗೆ ಕಡೆಗೆ ಕಾರು ಹೊರಟಿತ್ತು ಎನ್ನಲಾಗಿದ್ದು, ಲಕ್ಕುಂಡಿ ಗ್ರಾಮದ ಬಳಿ ತಿರುವಿನಲ್ಲಿ ಈ ಟನೆ ಸಂಭವಿಸಿದೆ. ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕಕ್ಕೆ ಉರುಳಿದ ಪರಿಣಾಮ ಬಸ್ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗದಗ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.