ಜಿಲ್ಲೆ

ಆಸಿಡ್​ ದಾಳಿ ಮಾಡಿದ್ದವನಿಗೆ 10 ವರ್ಷ ಜೈಲು, 10 ರೂ. ಲಕ್ಷ ದಂಡ

ಆನೇಕಲ್​: ಆಸಿಡ್​ ದಾಳಿ ಮಾಡಿದ್ದ ಅಪರಾಧಿಗೆ 10 ವರ್ಷ ಜೈಲು ಶಿೆ ಹಾಗೂ 10 ಲ ರೂಪಾಯಿ ದಂಡ ವಿಧಿಸಿ ಆನೇಕಲ್​ ಮೂರನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಸೋಮಶೇಖರ್​ ಆದೇಶ ನೀಡಿದ್ದಾರೆ. ಬಸಪ್ಪ ಎಂಬಾತ ಎಚ್​.ಆನಂದ್​ಮೇಟಿ ಎಂಬುವವರ ಮೇಲೆ 2019ರಲ್ಲಿ ಆಸಿಡ್​ ದಾಳಿ ಮಾಡಿದ್ದ. ಪ್ರಕರಣದ ತನಿಖೆ ನಡೆಸಿದ ಅಂದಿನ ಸರ್ಜಾಪುರ ಠಾಣೆಯ ತನಿಖಾಧಿಕಾರಿ ಟಿ.ವಿ.ಶಿವಶಂಕರ್​ ಅವರು ಆರೋಪಿ ಬಸಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸಾಾಧಾರಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಬಸಪ್ಪನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿೆ ವಿಧಿಸಿದೆ. ಸರ್ಕಾರಿ ಅಭಿಯೋಜಕ ಜಿ.ತಾರಾನಾಥ್​ ವಾದ ಮಂಡಿಸಿದ್ದರು.