ಶಿರಹಟ್ಟಿ: ದೇವಾಲಯದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಗ್ರಾಮಸ್ಥರಲ್ಲಿ ಒಗ್ಗಟ್ಟು ಮತ್ತು ಸಹಕಾರ ಮನೋಭಾವ ಬೆಳೆಯುತ್ತದೆ ಎಂದು ಕುಂದಗೋಳ ಕಲ್ಯಾಣಪುರಮಠ ಶ್ರೀ ಅಭಿನವ ಬಸವಣ್ಣ ಅಜ್ಜನವರು ಹೇಳಿದರು.
ತಾಲೂಕಿನ ಖಾನಾಪುರ ಗ್ರಾಮದಲ್ಲಿ ಮಂಗಳವಾರ ಶ್ರೀ ಮೈಲಾರಲಿಂಗೇಶ್ವರ ನೂತನ ದೇವಸ್ಥಾನ ಶಿಬಿರದ ಲೋಕಾರ್ಪಣೆ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ದೇವಾಲಯವು ಪ್ರಾರ್ಥನೆ ಮತ್ತು ಧ್ಯಾನಕ್ಕೆ ಸ್ಥಳಾವಕಾಶ ಒದಗಿಸುವುದರಿಂದ ಗ್ರಾಮಸ್ಥರಿಗೆ ಮಾನಸಿಕ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎಂದರು.
ವಿಜಯಪುರ ಜ್ಞಾನಯೋಗಾಶ್ರಮ ಶ್ರೀ ಸಂಗಮೇಶ್ವರ ಸ್ವಾಮಿಗಳ ಮಾತನಾಡಿ, ಭಾರತೀಯ ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರದೆ, ಜನಪದ ಸಾಹಿತ್ಯದಲ್ಲಿ ಮಹತ್ವದ ಪಾತ್ರವಹಿಸಿವೆ. ಅವು ಜನಪದ ಕಥೆಗಳು, ಹಾಡುಗಳು, ನಂಬಿಕೆಗಳು ಮತ್ತು ಆಚರಣೆಗಳ ಕೇಂದ್ರಬಿಂದುವಾಗಿವೆ. ದೇವಾಲಯಗಳು ಧಾರ್ವಿುಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿವೆ. ಇದು ಜನಪದ ಸಾಹಿತ್ಯದ ವಿಷಯಗಳು ಮತ್ತು ಪಾತ್ರಗಳನ್ನು ರೂಪಿಸಲು ಸಹಾಯ ಮಾಡಿದೆ ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮತ್ತು ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ದೇವಾಲಯಗಳಲ್ಲಿ ನಡೆಯುವ ಜಾತ್ರೆಗಳು ಮತ್ತು ಉತ್ಸವಗಳು ಜನಪದ ಸಾಹಿತ್ಯದ ಪ್ರಮುಖ ಭಾಗವಾಗಿವೆ. ಇವುಗಳಲ್ಲಿ ಜನರು ಹಾಡುಗಳು, ನೃತ್ಯಗಳು ಮತ್ತು ಇತರ ಸಾಂಸೃ್ಕಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.
ಜನಪದ ಸಾಹಿತ್ಯದಲ್ಲಿ ದೇವಾಲಯಗಳ ಪಾತ್ರವು ಭಾರತೀಯ ಸಂಸೃ್ಕಯಲ್ಲಿ ಅವುಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ. ದೇವಾಲಯಗಳು ಕೇವಲ ಧಾರ್ವಿುಕ ಸ್ಥಳಗಳಾಗಿರದೆ, ಸಾಮಾಜಿಕ ಮತ್ತು ಸಾಂಸೃ್ಕಕ ಜೀವನದ ಕೇಂದ್ರಬಿಂದುಗಳಾಗಿವೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ಪಪಂ ಸದಸ್ಯರು ಚನ್ನಬಸವ್ವ ರಾ ಕಲಾದಗಿ, ಸುರೇಶ್ ಅಕ್ಕಿ, ಬಸವರಾಜ ಹಲಸೂರ, ಮಹಾಂತೇಶ ಪವಾಡಶೆಟ್ಟರ್,ಎಂ ಕೆ ಲಮಾಣಿ, ಮಹಾಂತೇಶ ದಶಮನಿ, ಜಯರಡ್ಡಿ ಕೃಷ್ಣರಡ್ಡಿ ರಡೇರ, ಈಶ್ವರಪ್ಪ ರಡ್ಡೇರ, ಅಶೋಕ ಮಡಿವಾಳರ, ಮೈಲಾರಪ್ಪ ಪಡಿನವರ, ದ್ಯಾಮಣ್ಣ ಬಂಗಿ, ಚಂದ್ರು ರಡ್ಡೇರ, ರಾಜಶೇಖರಯ್ಯ ಹಿರೇಮಠ, ನಿಂಗಪ್ಪ ಗಾಣಿಗೇರ, ಈರಪ್ಪ ಗುಕ್ಕನವರ, ರಮೇಶ ಗಾಬರಿ, ಇಬ್ರಾಹಿಂಸಾಬ್ ತಹಶೀಲ್ದಾರ್, ಅಶೋಕ ಮಡಿವಾಳರ, ಬಸಪ್ಪ ಬೆಳವಟಗಿ, ಬಸಪ್ಪ ಹಡಪದ, ಪಂಚಪ್ಪ ಹಲಸೂರ, ದೇವಪ್ಪ ಛಬ್ಬಿ, ಶಂಕಪ್ಪ ಬಡಿಗೇರ, ತಿಪ್ಪಣ್ಣ ಹೂಗಾರ, ಇತರರಿದ್ದರು.