ಜಿಲ್ಲೆ

ವಿವಿಧ ಸಾಧಕರಿಗೆ ಸನ್ಮಾನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕನ್ನಡ ಭವನದಲ್ಲಿ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ನೆರವು ಸಂಸ್ಥೆಯ ಸಹಯೋಗದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಾಹಿತ್ಯ, ಕಲೆ, ಸಂಗೀತ, ನೃತ್ಯ, ರಂಗಭೂಮಿ, ಶೈಕ್ಷಣಿಕ, ಸಾಮಾಜಿಕ, ಕೃಷಿ ಹಾಗೂ ಸಾಂಸತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ನೆರವು ಅಧ್ಯೆ ಗಿರೀಜಾ ಹಿರೇಮಠ ಮತ್ತು ಸಾರಾ ಗೋಕಾವಿ ಇವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಅತಿಥಿಯಾಗಿದ್ದ ಡಾ. ರಮೇಶ ಮಹಾದೇವಪ್ಪನವರ, ಡಾ. ಕಲ್ಮೇಶ ಹಾವೇರಿಪೇಟ ಅವರು ಸಮಾರಂಭ ಉದ್ಘಾಟಿಸಿದರು.

ಅತಿಥಿಗಳಾಗಿ ಸಂತೋಷ ವೆರ್ಣೇಕರ, ಕಲಂದರ್ ಮುಲ್ಲಾ, ವೆಂಕಟೇಶ ಕಾಟವೆ, ಶಿವಪುತ್ರಪ್ಪ, ಸುಗುರಯ್ಯ ಸ್ವಾಮಿ, ಸದಾಶಿವ ಚೌಶೆಟ್ಟಿ , ಸ್ನೇಹ ಜಾಧವ, ಅನು ಹಲ್ಯಾಳ, ಪೂಜಾ ಬೊಮ್ಮನಹಳ್ಳಿ, ಮೀನಾಕ್ಷಿ, ರೂಪಾ, ರತ್ನಾ, ಸುಶೀಲ, ಮಂಜುಳಾ, ಪ್ರೇಮ, ಲಕ್ಷ್ಮೀ, ಅನ್ನರ್ಪೂಣ, ಅಶ್ವಿನಿ, ಅಕ್ಕಮ್ಮ, ಸಂಗೀತ, ಬಶೀರ್, ಜೈಶ್ರೀ ಹಾಗೂ ಇತರರು ಉಪಸ್ಥಿತರಿದ್ದರು.