ಜಿಲ್ಲೆ

ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ಸಾಧನೆ

ಮಡಿಕೇರಿ: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್‌ಶಿಪ್‌ನಲ್ಲಿ ಮಡಿಕೇರಿಯ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ.


ವಿದ್ಯಾರ್ಥಿಗಳಾದ ಬಿ.ಎಲ್.ಐಶ್ವರ್ಯ ರೈ ೨ ಚಿನ್ನ, ಲೋಹಿತ್ ರವಿಚಂದ್ರ ೨ ಚಿನ್ನ, ಬಾರನ ಚಿನ್ಮಯಿ ದಿನೇಶ್ ೨ ಚಿನ್ನ, ವಿ.ತೇಜಸ್ ರಾಜು ೨ ಚಿನ್ನ, ದೀಕ್ಷಿತ್ ಗೌಡ ೨ ಚಿನ್ನ, ಭುವನ್ ಕಲ್ಲಂಬಿ ತೇಜ ೨ ಚಿನ್ನ, ಬೊಮ್ಮುಡಿ ದೇವಿಶ್ರೀ ಪ್ರಭಾಕರ್ ೨ ಚಿನ್ನ, ತಮ್ಮದಾಗಿಸಿಕೊಂಡಿದ್ದಾರೆ.


ನಿಧಿ ಆರ್.ಅನ್ವೇಕರ್ ೧ ಚಿನ್ನ ೧ ಬೆಳ್ಳಿ, ಬಾರನ ಬಿಂಬಿತ್ ಸತೀಶ್ ಗೌಡ ೧ ಚಿನ್ನ, ೧ ಬೆಳ್ಳಿ, ಮಾನ್ವಿ ರವಿಚಂದ್ರ ೧ ಚಿನ್ನ, ೧ ಬೆಳ್ಳಿ, ನಿಶಾನ್ ಬಿ.ಎಸ್.ಅನಘ ೧ ಚಿನ್ನ, ೧ ಬೆಳ್ಳಿ, ಆದ್ಯ ಜಿ.ವರ್ಣೆಕರ್ ೧ ಚಿನ್ನ, ೧ ಬೆಳ್ಳಿ, ಎ.ಅಚಲ್ ೧ ಚಿನ್ನ, ೧ ಬೆಳ್ಳಿ, ಮಿಂಚು ಲೋಕೇಶ್ ೧ ಚಿನ್ನ, ೧ ಬೆಳ್ಳಿ, ಪಾಣತ್ತಲೆ ತನುಷ ಬೋಪಯ್ಯ ೧ ಚಿನ್ನ, ೧ ಬೆಳ್ಳಿ, ಪಿ.ಬಿ.ಶಿವ ೧ ಚಿನ್ನ, ೧ ಬೆಳ್ಳಿ, ಈ.ಎಸ್.ನಿಶಾಂತ್ ೧ ಚಿನ್ನ ೧ ಬೆಳ್ಳಿ, ವಿ.ಆರ್.ವೇದ ಪ್ರಕಾಶ್ ೧ ಚಿನ್ನ, ೧ ಬೆಳ್ಳಿ, ಲಾಂಚನ್ ಕಲ್ಲಂಬಿ ತೇಜ ೧ ಚಿನ್ನ, ೧ ಬೆಳ್ಳಿ ಪಡೆದುಕೊಂಡಿದ್ದಾರೆ.


ಟಿ.ಪಿ.ಪೃಥ್ವಿನ್ ೨ ಬೆಳ್ಳಿ, ಮಾನ್ವಿ ಜಿ.ವರ್ಣೆಕರ್ ೨ ಬೆಳ್ಳಿ, ತೆನ್ನಿರ ಶಾನ್ ಪೊನ್ನಪ್ಪ ೨ ಬೆಳ್ಳಿ, ಟಿ.ಜೆ.ಪ್ರನವ್ ಆಚಾರ್ಯ ೨ ಬೆಳ್ಳಿ, ಟಿ.ಜೆ.ಪ್ರನೀತ್ ಆಚಾರ್ಯ ೨ ಬೆಳ್ಳಿ, ಬಿಲಾಲ್ ೨ ಬೆಳ್ಳಿ ಹಾಗೂ ಬಾರನ ಪ್ರೇಕ್ಷಿತ್ ಗೌಡ ೨ ಬೆಳ್ಳಿ ಗೆದ್ದಿದ್ದಾರೆ. ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ.ಲೋಕೇಶ್ ರೈರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.