ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳ ಪುಟಾಣಿ ವಿಜ್ಞಾನ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳೊಂದಿಗೆ ಮುಖ್ಯಶಿಕ್ಷಕರಾದ ಕವನ್ ಕುದುಪಜೆ, ಸ್ವರೂಪಾ ಕೆ. ಬಿ., ಗಣಿತ ಶಿಕ್ಷಕಿ ಯೂ. ಬಿ.ಟೀನಾ ಇದ್ದರು.  
ಜಿಲ್ಲೆ

ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ

ರವಿಕುಮಾರ್ ಪಿ. ಕೆ

ನಾಪೋಕ್ಲು: ಇಲ್ಲಿಗೆ ಸಮೀಪದ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳು ಪುಟಾಣಿ ವಿಜ್ಞಾನ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.

ಪುಟಾಣಿ ವಿಜ್ಞಾನ ಬಳಗದವರು ನಡೆಸಿದ ರಾಷ್ಟ್ರಮಟ್ಟದ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಚೇರಂಬಾಣೆ ಕೊಟ್ಟೂರ್ ರಾಜರಾಜೇಶ್ವರಿ ಶಾಲೆಯ ಒಟ್ಟು 68 ವಿದ್ಯಾರ್ಥಿಗಳು ಭಾಗವಹಿಸಿ ಉತ್ತೀರ್ಣರಾಗಿದ್ದಾರೆ.

ಈ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಚಕ್ಷ ಕಾವೇರಮ್ಮ ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನ, ರಾಜ್ಯಮಟ್ಟದಲ್ಲಿ 8ನೇ ತರಗತಿಯ ಟಿ.ಡಿ. ಭುವನ್ 6ನೇ ಸ್ಥಾನ, 9ನೇ ತರಗತಿಯ ಎಚ್.ಎಲ್.ಮಂಜುಳಾ 6ನೇ ಸ್ಥಾನ, ಜಿಲ್ಲಾ ಮಟ್ಟದಲ್ಲಿ 10ನೇ ತರಗತಿಯ ಮೋಕ್ಷ ಬೋಪಣ್ಣ 5ನೇ ಸ್ಥಾನ, 9ನೇ ತರಗತಿಯ ಕೆ.ಜೆ. ತ್ರಿಶಾ 7ನೇ ಸ್ಥಾನ, ತಾಲೂಕು ಮಟ್ಟದಲ್ಲಿ 10ನೇ ತರಗತಿಯ ಕೆ.ಕೆ.ಇಂಚರ 5ನೇ ಸ್ಥಾನ 8ನೇ ತರಗತಿಯ ಪ್ರೇಕ್ಷಾ ಪೊನ್ನಮ್ಮ 5ನೇ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ.

ಈ ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಶಿಕ್ಷಕರಾದ ಕವನ್ ಕುದುಪಜೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕೆ.ಬಿ. ಸ್ವರೂಪಾ, ಗಣಿತ ಶಿಕ್ಷಕಿ ಯೂ.ಬಿ. ಟೀನಾ ಮಾರ್ಗದರ್ಶನ ನೀಡಿದರು.