ಎಚ್.ಬಿ.ಐಶ್ವರ್ಯ ಶೇ.86.5 
ಜಿಲ್ಲೆ

ಮಾನಸ ಎಜುಕೇಷನ್ ಟ್ರಸ್ಟ್ ವಿದ್ಯಾರ್ಥಿಗಳ ಸಾಧನೆ

ಮದ್ದೂರು: ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಾಲೂಕಿನ ಬೆಸಗರಹಳ್ಳಿ ಮಾನಸ ಎಜುಕೇಷನ್ ಟ್ರಸ್ಟ್ ಹೊಂಬಾಳಮ್ಮ, ಡಿ.ಕರಡಿಗೌಡ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದು, ಪರೀಕ್ಷೆಗೆ ಹಾಜರಾದ 29 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇವರಲ್ಲಿ ಇಬ್ಬರು ಅತ್ಯುನ್ನತ, 23 ವಿದ್ಯಾರ್ಥಿಗಳು ಪ್ರಥಮ, ನಾಲ್ವರು ದ್ವಿತೀಯ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ: ಎಚ್.ಬಿ.ಐಶ್ವರ್ಯಾ ಶೇ.86.5, ಎಂ.ಆರ್.ತೇಜಸ್ ಶೇ.86.1, ಎಂ.ವರ್ಷಿತಾ ಶೇ.83, ಕೆ.ಕಿಶನ್ ಶೇ.81.3, ಎಂ.ವಿ.ಕಿಶನ್ ಶೇ.81.3, ಎಸ್.ನಿಶ್ಚಿತಾ ಶೇ.80.8, ಎಸ್.ಲಿಖಿತಾ ಶೇ.80.1, ಶ್ರೀಲಕ್ಷ್ಮೀ ಶೇ.80.1 ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 31 ವಿದ್ಯಾರ್ಥಿಗಳ ಪೈಕಿ 29 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 4 ಅತ್ಯುನ್ನತ, 18 ಪ್ರಥಮ ಶ್ರೇಣಿ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗ: ಎನ್.ವೆಂಕಟೇಶ್ ಶೇ.94.17, ಮಹಮದ್ ಅಫ್ನಾನ್ ಶೇ.92.83, ಎಚ್.ಸಿ.ಅಕ್ಷಯ್ 91.5, ರಕ್ಷಿತಾ ಶೇ.87.67, ಎನ್.ಬಿ.ರಮ್ಯಾ ಶೇ.81.3, ಆರ್.ರೇಖಾ ಶೇ.81, ಡಿ.ಪಿ.ದರ್ಶಿನಿಗೌಡ ಶೇ.80.5 ಅಂಕಗಳಿಸಿದ್ದಾರೆ.

ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಹಾಗೂ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.