ಜಿಲ್ಲೆ

ಕ್ರೀಡಾಕೂಟದಲ್ಲಿ ಲಕ್ಷೆ್ಮೕಶ್ವರ ತಾಲೂಕು ಸರ್ಕಾರಿ ನೌಕರರ ಸಂಘದ ಸಾಧನೆ

ಲಕ್ಷೆ್ಮೕಶ್ವರ: ಗದಗನಲ್ಲಿ 2024-25ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಲಕ್ಷೆ್ಮೕಶ್ವರ ತಾಲೂಕು ಸರ್ಕಾರಿ ನೌಕರರ ಸಂಘದವರು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ತಾಲೂಕು ನೌಕರರ ಸಂಘದವರು ಗುಂಪು ಆಟಗಳಲ್ಲಿ ಖೋಖೋ (ಪ್ರಥಮ), ಕಬಡ್ಡಿ (ದ್ವಿತೀಯ), ವಾಲಿಬಾಲ್ (ದ್ವಿತೀಯ), 4/100 ರಿಲೇ (ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ.

ವೈಯಕ್ತಿಕ ಸ್ಪರ್ಧೆಗಳಲ್ಲಿ ಎ.ಎ. ನದಾಫ್ (ಈಜು ಪ್ರಥಮ), ಶ್ರೀಕಾಂತ ನಂದೆಣ್ಣವರ 130 ಕೆಜಿ ಭಾರ ಎತ್ತುವುದು (ಪ್ರಥಮ), ಫಕೀರೇಶ ಡಂಬಳ 400 ಮೀಟರ್ ಓಟ (ಪ್ರಥಮ), ಆನಂದ ಮುಳಗುಂದ ಪ್ರೀಸ್ಟೈಲ್ ಕುಸ್ತಿ (ದ್ವಿತೀಯ), ಎನ್.ಎಸ್. ಬಂಕಾಪುರ ಈಜು (ದ್ವಿತೀಯ), ಸಂತೋಷ ರಾಥೋಡ ಚಕ್ರ ಎಸೆತ (ಪ್ರಥಮ) ಅಜಿತ್ ಬಾಣದ ಭಾರ ಎತ್ತುವುದು (ಪ್ರಥಮ), ಪ್ರವೀಣ ಬರಡಿ ಗುಂಡು ಎಸೆತ (ಪ್ರಥಮ), ಆರ್.ಕೆ. ಹಡಪದ 200 ಮೀಟರ್ ಓಟ (ದ್ವಿತೀಯ), ತೇಜಸ್ ಕರ್ಜಗಿ 800 ಮೀಟರ್ ಓಟ (ಪ್ರಥಮ), ಭಾರತಿ ಚೌಡಾಪೂರ ಯೋಗ (ಪ್ರಥಮ), ಕಾವೇರಿ ಸುಣಗಾರ ಚದುರಂಗ (ಪ್ರಥಮ), ಎಂ.ಎಂ. ಶಿವಶಿಂಪಿ 200 ಮೀಟರ್ ಬಟರ್ ಫ್ಲೈ (ದ್ವಿತೀಯ), ರಮೇಶ ಹೊಂಬಳ ಉದ್ದ ಜಿಗಿತ (ಪ್ರಥಮ), ಜಿ.ಪಿ. ನಾವಿ 50 ಮೀಟರ್ ಸ್ವಿಮ್ಮಿಂಗ್ (ದ್ವಿತೀಯ) ಈ ರೀತಿ ಪ್ರಶಸ್ತಿ ಪಡೆದು ಉತ್ತಮ ಸಾಧನೆ ಮಾಡಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಸಂಘದ ಸದಸ್ಯರ ಸಾಧನೆಗೆ ನೌಕರರ ಸಂಘದ ತಾಲೂಕಾಧ್ಯಕ್ಷ ಗುರುರಾಜ ಹವಳದ ಹಾಗೂ ನಿಕಟಪೂರ್ವ ಅಧ್ಯಕ್ಷ ಡಿ.ಎಚ್. ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.

ಕ್ರೀಡಾಕೂಟದಲ್ಲಿ ಸಂಘದ ಕಾರ್ಯದರ್ಶಿ ಎಂ.ಎ. ನದಾಫ, ಎಂ.ಡಿ. ವಾರದ, ಎ.ಬಿ. ಗೌಡರ ಆನಂದ್ ಕರ್ಜಗಿ, ಎ.ಎಂ. ಅಕ್ಕಿ, ಬಿ.ಎಂ. ಯರಗುಪ್ಪಿ, ಗಿರೀಶ ಕುಂಬಾರ, ಬಿ.ಎಸ್. ಹರಲಾಪೂರ, ಚಂದ್ರು ನೇಕಾರ, ಬಿ.ಬಿ. ಯತ್ತಿನಹಳ್ಳಿ, ಡಿ.ಡಿ. ಲಮಾಣಿ, ಎಂ.ಎಸ್.ಹಿರೇಮಠ, ಇತರರಿದ್ದರು.