kusti pandyata  
ಜಿಲ್ಲೆ

ಕೋಟೇಶ್ವರ ಕೆಪಿಎಸ್ ವಿದ್ಯಾರ್ಥಿಗಳ ಸಾಧನೆ

Karthika K.S

ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸೈಂಟ್ ಜೋಸೆಫ್ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ 14 ಮತ್ತು 17ರ ವಯೋವಾನದ ಕುಂದಾಪುರ ತಾಲೂಕು ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

14ರ ವಯೋವಾನದ ಬಾಲಕರ ವಿವಿಧ ಕೆಜಿ ವಿಭಾಗಗಳಲ್ಲಿ ಸುಶಾಂತ್ ಪ್ರಥಮ, ಸಾತ್ವಿಕ್, ಪ್ರಣಂ ದ್ವಿತೀಯ ಹಾಗೂ ಆದರ್ಶ ತೃತೀಯ ಸ್ಥಾನ ಪಡೆದಿದ್ದಾರೆ. 14ರ ವಯೋವಾನದ ಬಾಲಕಿಯರ ವಿವಿಧ ಕೆಜಿ ವಿಭಾಗದಲ್ಲಿ ಅನನ್ಯಾ, ಸಮೃದ್ಧಿ ಪ್ರಥಮ, ವಾನ್ವಿ, ಪ್ರಾರ್ಥನಾ, ಜ್ಞಾನ, ಸಂಜನಾ ಮತ್ತು ಬ್ರಾಹ್ಮಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

17ರ ವಯೋವಾನದ ಬಾಲಕರ ವಿವಿಧ ಕೆಜಿ ವಿಭಾಗದಲ್ಲಿ ವಿವೇಕ್ ದ್ವಿತೀಯ, ರುದ್ರ ಹಾಗೂ ಅದ್ನಾನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 17ರ ವಯೋವಾನದ ಬಾಲಕಿಯರ ವಿವಿಧ ಕೆಜಿ ವಿಭಾಗದಲ್ಲಿ ಪ್ರತಿಕ್ಷಾ, ವಿಶ್ರುತಾ, ಸಂಜನಾ ಪ್ರಥಮ, ವೈಷ್ಣವಿ ಶೆಟ್ಟಿ, ಸೌಜನ್ಯ, ಝಲೇಖ ದ್ವಿತೀಯ ಮತ್ತು ಪಾವನಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಶಾಲೆಗೆ ಒಟ್ಟು ಆರು ಪ್ರಥಮ, 11 ದ್ವಿತೀಯ ಹಾಗೂ 4 ತೃತೀಯ ಬಹುಮಾನ ಬಂದಿದ್ದು, ಆರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಉಪ ಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಪ್ರಶಂಸಿಸಿದ್ದಾರೆ.