ಜಿಲ್ಲೆ

ಜಿ.ಸಿ. ಕಾಲೇಜ್​ನ 20 ಕೆಡೆಟ್​ಗಳ ಸಾಧನೆ

ಅಂಕೋಲಾ: ಕಾರವಾರದಲ್ಲಿ ಇತ್ತೀಚೆಗೆ ನಡೆದ ಎನ್​ಸಿಸಿ ವಾರ್ಷಿಕ ತರಬೇತಿ ಶಿಬಿರದಲ್ಲಿ ಜಿ.ಸಿ. ಕಾಲೇಜ್​ನ 20 ಕೆಡೆಟ್​ಗಳು ವಿಶೇಷ ಸಾಧನೆ ಮಾಡಿದ್ದಾರೆ.

ಉ.ಕ.ಜಿಲ್ಲೆಯ 18 ಕಾಲೇಜುಗಳು ಸೇರಿ 500 ಕೆಡೆಟ್​ಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ವಿವಿಧ ಕ್ರೀಡೆಗಳು, ಸೇನಾ ಕವಾಯತು, ಶಸ್ತ್ರಾಸ್ತ್ರ ತರಬೇತಿ, ಫೈರಿಂಗ್, ಮ್ಯಾಪ್ ರೀಡಿಂಗ್ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಿ.ಸಿ. ಕಾಲೇಜಿನ 20 ಕೆಡೆಟ್​ಗಳು ಭಾಗವಹಿಸಿದ್ದರು. ಅವರಲ್ಲಿ ಸಾರ್ಜಂಟ್ ಜಾಹ್ನವಿ ಮೋರೆಚರ್ಚಾ ಸ್ಪರ್ಧೆಯಲ್ಲಿ (ಪ್ರಥಮ), ಸಿಪಿಎಲ್ ನಾಗಶ್ರೀ ನಾಯ್ಕ ಕ್ವೀಜ್​ನಲ್ಲಿ (ದ್ವಿತೀಯ), ಸಮನ್ವಿತಾ ಎನ್., ಮೇಘಾ ಎನ್., ಸೌಂದರ್ಯ ಆರ್., ತುಕಾರಾಮ ಕೆ., ಲಕ್ಷ್ಮಣ ಕೆ, ಸಾಹು ಪಟಕಾರೆ ಮುಂತಾದ ಕೆಡೆಟ್​ಗಳು ಸಾಹಸ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ. ಜೂನಿಯರ ಅಂಡರ ಆಫೀಸರ್ ಸೌಂದರ್ಯ ಆರ್., ಅವರು ತಮಿಳುನಾಡಿನ ನೀಲಗಿರಿ ಪರ್ವತ ಶ್ರೇಣಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಟ್ರೆಕಿಂಗ್ ಕ್ಯಾಂಪ್​ಗೆ ಆಯ್ಕೆಯಾಗಿ ಭಾಗವಹಿಸಿರುವುದು ಗಮನಾರ್ಹವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಡಾ.ಎಸ್.ವಿ. ವಸ್ತ್ರದ, ಎನ್.ಸಿ.ಸಿ.ಅಧಿಕಾರಿ ಹರಿಪ್ರಸಾದ ದೇಸಾಯಿ ಮತ್ತು ಆಡಳಿತ ಮಂಡಳಿಯ ಮೆಚ್ಚುಗೆ ವ್ಯಕ್ತಪಡಿಸಿದೆ.