ಜಿಲ್ಲೆ

ರಾಷ್ಟ್ರೀಯ ಕಿಕ್​ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಸಾಧನೆ

ಮುಳಬಾಗಿಲು: ಛತ್ತೀಸ್​ಗಢದ ರೈಪುರನ ಬುಧಪರ ಬಾಲ್ಬರ್​ ಸಿಂಗ್​ ಜೂನೇಜ ಇಂಡೂರ್​ ಸ್ಟೇಡಿಯಂನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಿಕ್​ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನ ಸೀನಿಯರ್ಸ್​ ಮತ್ತು ಮಾಸ್ಟರ್ಸ್​ ವಿಭಾಗದಲ್ಲಿ ಕೋಲಾರ ಜಿಲ್ಲಾ ಕಿಕ್​ ಬಾಕ್ಸಿಂಗ್​ ಅಸೋಸಿಯೇಷನ್​ ಸದಸ್ಯ ಮುಳಬಾಗಿಲಿನ ಮಿಟ್ಟೂರು ಎಂ.ಎನ್​. ನಾಗೇಶ ಅವರು ಪಾಯಿಂಟ್​ ಫೈಟ್​ನಲ್ಲಿ ಪ್ರಥಮ, ಕಿಕ್​ ಲೈಟ್​ ಮತ್ತು ಲೈಟ್​ ಕಾಂಟಾಕ್ಟ್​ ವಿಭಾಗದಲ್ಲಿ ತೃತೀಯ ಸ್ಥಾನ, ತಾಲೂಕಿನ ಬೆಳಗಾನಹಳ್ಳಿ ಬಿ. ವಿ. ಮಂಜುನಾಥ ಪಾಯಿಂಟ್​ ಫೈಟ್​, ಕಿಕ್​ಲೈಟ್​, ಲೈಟ್​ ಕಾಂಟಾಕ್ಟ್​ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಕೀರ್ತಿ ಗಳಿಸಿದ್ದಾರೆ.