ಕಬ್ಬೂರ: ಪಟ್ಟಣದ ಶ್ರೀಮತಿ ಅನ್ನಪೂರ್ಣಾ ಬೆಲ್ಲದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಚಿಕ್ಕೋಡಿಯಲ್ಲಿರುವ ಕೆಎಲ್‌ಇ ಸಂಸ್ಥೆ ಬಿ.ಕೆ. ಕಾಲೇಜು ಮೈದಾನದಲ್ಲಿ ಈಚೆಗೆ ನಡೆದ ತಾಲೂಕುಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದ ವಿವಿಧ ಸ್ಪರ್ಧೆಯಲ್ಲಿ ಸಾಧನೆ ಮಾಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾವೇರಿ ಜಾಲಿಕಟ್ಟಿ ೪೦೦ ಮೀ. ಓಟ ಪ್ರಥಮ, ೨೦೦ ಮೀ. ಓಟ ದ್ವಿತೀಯ ಹಾಗೂ ಎತ್ತರಜಿಗಿತದಲ್ಲಿ ತೃತೀಯ ಸ್ಥಾನ, ಪೂಜಾ ಕುರನ್ನವರ ೨೦೦ ಮೀ. ಓಟ ತೃತೀಯ, ಸಮಿ ಹುದಲಿ ೧೦೦ ಮೀ. ಓಟ ತೃತೀಯ, ಬಾಲಕಿಯರ ೪+೧೦೦ ಮೀ. ರಿಲೇ ತೃತೀಯ, ಬಾಲಕರ ಥ್ರ‍್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಮಹೇಶ ಬೆಲ್ಲದ, ಕಾರ್ಯದರ್ಶಿ ಪ್ರಕಾಶ ಬೆಲ್ಲದ, ಪ್ರಾಂಶುಪಾಲ ಡಾ.ಮಹೇಂದ್ರ ಕೆ.ಆರ್., ಉಪಪ್ರಾಂಶುಪಾಲ ರಾಜು ಮಹಿಪತಿ, ದೈಹಿಕ ಶಿಕ್ಷಣ ಶಿಕ್ಷಕ ರಾಜಕುಮಾರ ಮುತಾರೆ, ಶ್ರೀಕಾಂತ ಕರೋಶಿ, ಶಿಕ್ಷಕರು, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.