ಜಿಲ್ಲೆ

ನಿಶ್ಚಿತ ಗುರಿಯಿಂದ ಸಾಧನೆ

ಇಂದಿರಾ ಎನ್ ಕೆ

ಹೆಬ್ರಿ: ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಿಕೊಂಡು, ನಿಶ್ಚಿತ ಗುರಿ ಇಟ್ಟುಕೊಂಡಾಗ ಸಾಧಕರಾಗಲು ಸಾಧ್ಯ ಎಂದು ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಹೇಳಿದರು.

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಂಸ್ಥೆಯಲ್ಲಿ ಸೋಮವಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಣ ಇಲಾಖೆಯ ಹೆಬ್ರಿ ಸಿ.ಆರ್.ಪಿ. ರಾಘವೇಂದ್ರ ಮಾತನಾಡಿ, ಮಹಾಭಾರತದ ಅರ್ಜುನನಿಗೆ ಮರದಲ್ಲಿ ಕುಳಿತ ಹಕ್ಕಿಯ ಕಣ್ಣು ಕಾಣಿಸಿದ ಹಾಗೆ ಯಾವುದೇ ವಿಷಯದಲ್ಲಿ ನಿರ್ದಿಷ್ಟ ಏಕಾಗ್ರತೆ ಹೊಂದಿದಾಗ ಮಾತ್ರ ಕಲಿಕೆ ಸಾಧ್ಯವಾಗುತ್ತದೆ ಎಂದರು.

ಸಾಹಿತ್ಯ, ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕಿ ಅಪರ್ಣಾ ಆಚಾರ್, ಶಕುಂತಲಾ ಉಪಸ್ಥಿತರಿದ್ದರು. ಪ್ರತಿಮಾ ಸ್ವಾಗತಿಸಿದರು. ಪ್ರೇಮಲತಾ ವಂದಿಸಿದರು. ಮೀನಾಕ್ಷಿ ನಿರೂಪಿಸಿದರು.