ವಿಜಯವಾಣಿ ಸುದ್ದಿಜಾಲ ಧಾರವಾಡ
ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಸ್ಪರ್ಧಾ ಜೀನಿಯಸ್ ಅಕಾಡೆಮಿ ಅಧ್ಯಕ್ಷ ಸಿದ್ದಣ್ಣ ದಳವಾಯಿ ಅಭಿಪ್ರಾಯಪಟ್ಟರು.
ನಗರದ ಸ್ಪರ್ಧಾ ಜೀನಿಯಸ್ ಅಕಾಡೆಮಿಯಲ್ಲಿ ಕೆಎಎಸ್, ಪಿಎಸ್ಐ ತರಬೇತಿ ನಿರತ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಏರ್ಪಡಿಸಿದ್ದ ಉಪನ್ಯಾಸಕರಿಗೆ ಗುರುವಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕದ ಜ್ಞಾನ ಮಾತ್ರ ಶಿಕ್ಷಣವೆಂದು ಪರಿಗಣಿತವಾಗುವುದಿಲ್ಲ. ಜೀವನ ಜ್ಞಾನವೂ ಶಿಕ್ಷಣವೇ ಆಗಿದೆ. ಹೀಗಾಗಿ ವಿದ್ಯಾರ್ಥಿಗಳು ದೈಹಿಕ ಬಲ, ನೈತಿಕ ಬಲ ಹಾಗೂ ಮನೋಬಲ ಬೆಳೆಸಿಕೊಂಡು ಪರಿರ್ಪೂಣ ವ್ಯಕ್ತಿತ್ವ ಹೊಂದಬೇಕು. ಸಂಸ್ಥೆ ಎಂದಿಗೂ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದು, ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಸಂಸ್ಥೆ ನೂರಾರು ವಿದ್ಯಾರ್ಥಿಗಳೇ ಸಾಕ್ಷಿ ಎಂದರು.
ಸಾಧಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನಿಸಲಾಯಿತು. ಸಂಸ್ಥೆ ಉಪನ್ಯಾಸಕರಾದ ಶರಣು ಚಿಕ್ಕನಗೌಡ, ಹನುಮಂತ ಶಿರಗೋಜಿ, ಪ್ರಕಾಶ ಕಲ್ಲೋಳಿ, ಪ್ರಸಾದ ನಂದಿಕುರಳಿ, ಸುರೇಶ ಮಾನವಿ, ಬಿ.ಬಿ. ಸಲಗರ, ನಾಗರಾಜ್ ಕೊರಬು, ಇತರರು ಇದ್ದರು.