ವಿಜಯಪುರದ ಸಂಗನಬಸವ ಅಂತಾರಾಷ್ಟ್ರೀಯ ಶಾಲೆ ವಿದ್ಯಾರ್ಥಿಗಳು ಕ್ರಿಕೆಟ್ ಮತ್ತು ಫುಟ್‌ಬಾಲ್ ಪಂದ್ಯದಲ್ಲಿ ಪ್ರಶಸ್ತಿ ಪಡೆದುಕೊಂಡಿರುವುದು. ದೈಹಿಕ ಶಿಕ್ಷಣ ಶಿಕ್ಷಕರಾದ ಸಾಯಬಣ್ಣ ಅಡವಿ, ಕಿನ್ನು ಜಾಧವ, ಸಾಗರ ಮೋರೆ, ಮಹಾನಂದ ಗಸ್ತಿ ಮತ್ತಿತರರಿದ್ದಾರೆ. 
ಜಿಲ್ಲೆ

ಸಂಗನಬಸವ ಶಾಲೆ ವಿದ್ಯಾರ್ಥಿಗಳ ಸಾಧನೆ

ವಿಜಯಪುರ: ಇಲ್ಲಿನ ಬಿ.ಎಂ. ಪಾಟೀಲ್ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಅಂತರ ಶಾಲಾ ಮಟ್ಟದ ಕ್ರಿಕೆಟ್ ಮತ್ತು ಫುಟ್‌ಬಾಲ್ ಪಂದ್ಯದಲ್ಲಿ ಸಂಗನಬಸವ ಅಂತಾರಾಷ್ಟ್ರೀಯ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ಫುಟ್‌ಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸಾಯಬಣ್ಣ ಅಡವಿ, ಕಿನ್ನು ಜಾಧವ, ಸಾಗರ ಮೋರೆ, ಮಹಾನಂದ ಗಸ್ತಿ, ತಂಡದ ನಾಯಕರಾದ ಸಿಂಚನ್ ಟಿ. ಆಕಾಶ್ ಪಾಟೀಲ್ ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.