ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಸುತ್ತೂರು ಜೆಎಸ್‌ಎಸ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಇದ್ದರು. 
ಜಿಲ್ಲೆ

ಪ್ರತಿಭಾ ಕಾರಂಜಿಯಲ್ಲಿ ಸುತ್ತೂರು ಮಕ್ಕಳ ಸಾಧನೆ

ಸುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಂಜನಗೂಡಿನ ಕಾರ್ಮೆಲ್ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಲ್ಲಿನ ಜೆಎಸ್‌ಎಸ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.

1 ರಿಂದ 4ನೇ ತರಗತಿ ವೈಯಕ್ತಿಕ ಸ್ಪರ್ಧೆಯಲ್ಲಿ ಎಸ್.ಆರ್.ತನ್ವಿತ (ಭಕ್ತಿಗೀತೆ ತೃತೀಯ), ಅನುಶ್ರೀ ಈರಣ್ಣ ಚಚಡಿ (ಧಾರ್ಮಿಕ ಪಠಣ (ಸಂಸ್ಕೃತ) ತೃತೀಯ ಸ್ಥಾನ) ಗಳಿಸಿದ್ದಾರೆ.

5 ರಿಂದ 7ನೇ ತರಗತಿ ವೈಯಕ್ತಿಕ ಸ್ಪರ್ಧೆಯಲ್ಲಿ ಸಂಗಮೇಶ (ದೇಶಭಕ್ತಿ ಗೀತೆ ಪ್ರಥಮ), ಬಿ.ಎಚ್.ಸಹನಾ (ಭಕ್ತಿಗೀತೆ ಪ್ರಥಮ), ಕಥೆ ಹೇಳುವುದು ದ್ವಿತೀಯ, ಭರತ್‌ಕನ್ನಡ ಕಂಠಪಾಠ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಂತೆಯೆ ವಾಜಿದ್‌ಮುಲ್ಲಾ ಹಿಂದಿ ಕಂಠಪಾಠ ತೃತೀಯ, ಧಾರ್ಮಿಕ ಪಠಣದಲ್ಲಿ ಪರಿಣಿತ ಆರಾಧ್ಯ ದ್ವಿತೀಯ, ಚಿತ್ರಕಲೆಯಲ್ಲಿ ಜಿ.ಎಸ್.ಚೇತನ್ ತೃತೀಯ ಸ್ಥಾನ ಗಳಿಸಿದ್ದಾರೆ. ಸಂಗಮೇಶ, ಸಹನಾ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.