ಜಿಲ್ಲೆ

ಪದವಿ ಪೂರ್ವ ಕಾಲೇಜು ತಾಲೂಕು ಮಟ್ಟದ ಕ್ರೀಡಾಕೂಟ: ಮಾಂಡವ್ಯ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಮಂಡ್ಯ: ನಗರದಲ್ಲಿ ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜಿನ ಮಂಡ್ಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾಂಡವ್ಯ ಇಂಟಿಗ್ರೇಟೆಡ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್‌ನಲ್ಲಿ ಪ್ರಥಮ, ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ದ್ವೀತಿಯ ಸ್ಥಾನ, ಎಚ್.ಎಸ್.ನಿಸರ್ಗ ಟ್ರಿಪಲ್ ಜಂಪ್‌ನಲ್ಲಿ(ಪ್ರ), 100 ಮೀ ಓಟದಲ್ಲಿ (ದ್ವಿ), ಕ್ರಾಸ್‌ಕಂಟ್ರಿಯಲ್ಲಿ (ನಾಲ್ಕನೇ ಸ್ಥಾನ), ವಾಕಿಂಗ್‌ನಲ್ಲಿ ಲಾವಣ್ಯ ಸಿ.ಎಸ್.ಗೌಡ(ಪ್ರ), ಹ್ಯಾಮರ್ ಎಸೆತದಲ್ಲಿ ಕಾವ್ಯಾ(ಪ್ರ), 200 ಮೀ ಓಟದಲ್ಲಿ ಆರ್.ಎಸ್.ಮೋನಿಕಾ(ತೃ), ಡಿ.ಎಸ್.ಮಂದಾರಾ ಮಿತ್ರ 1500 ಮೀ ಓಟದಲ್ಲಿ(ಪ್ರ), ಕ್ರಾಸ್ ಕಂಟ್ರಿಯಲ್ಲಿ (ಪ್ರ), 300 ಮೀ ಓಟದಲ್ಲಿ (ತೃ), ಜಾವಲಿನ್ ಎಸೆತದಲ್ಲಿ ಎಂ.ಎಸ್.ಧನಲಕ್ಷ್ಮೀ(ಪ್ರ), ಕ್ರಾಸ್ ಕಂಟ್ರಿಯಲ್ಲಿ ದೀಪುಶ್ರೀ(ತೃ) ಸ್ಥಾನ ಪಡೆದಿದ್ದಾರೆ.

ಬಾಲಕರ ವಿಭಾಗದಲ್ಲಿ ಥ್ರೋ ಬಾಲ್ನಲ್ಲಿ(ದ್ವಿ), ಬಾಲ್‌ಬ್ಯಾಡ್ಮಿಂಟನ್‌ನಲ್ಲಿ(ದ್ವಿ), ಕಬಡ್ಡಿ(ದ್ವಿ), 4*400 ರಿಲೇ(ದ್ವಿ), ಎ.ದರ್ಶನ್ 200 ಮೀ ಓಟ(ಪ್ರ), 400 ಮೀ ಓಟ(ಪ್ರ), 400 ಮೀ ಹರ್ಡಲ್ಸ್ (ಪ್ರ), ಎಚ್.ಎನ್.ನಂದನ್ ಗುಂಡು ಎಸೆತ(ಪ್ರ), ಎಚ್.ಎನ್.ಪ್ರೀತಂ ಡಿಸ್ಕಸ್ ಥ್ರೋ(ಪ್ರ), ಗುಂಡು ಎಸೆತ(ದ್ವಿ), ಲೋಕೇಶ್ ಬಾಬು ವಾಕಿಂಗ್‌ನಲ್ಲಿ (ಪ್ರ), ಆರ್.ಫ್ರಾನ್ಸಿಸ್ 100 ಮೀ ಹರ್ಡಲ್ಸ್‌ನಲ್ಲಿ (ಪ್ರ) ಬಹುಮಾನ ಗಳಿಸಿದ್ದಾರೆ.

ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಎಸ್‌ಬಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್, ಶೈಕ್ಷಣಿಕ ಪಾಲುದಾರರಾದ ಅವಿನಾಶ್ ಮಾರಗೌಡನಹಳ್ಳಿ, ಎಂ.ಪಿ.ಮೋಹನ್, ರಾಘವೇಂದ್ರ, ಅರ್ಚನಾ, ಚನ್ನೇಶ, ಉಮೇಶ್, ಸುಮನ್ ಅಭಿನಂದಿಸಿದರು.