ಜಿಲ್ಲೆ

ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ

ಮಡಿಕೇರಿ: ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಚೆನ್ನೈನ ಚೆನ್ನೈ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ೪೪ನೇ ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-೨೦೨೪ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ೨೩ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವಿಜೇತರಾಗಿದ್ದು, ೧೪ ಚಾಂಪಿಯನ್ ಟ್ರೋಫಿ, ೮ ಚಿನ್ನದ ಪದಕ ಮತ್ತು ೧ ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬ್ರೈನೋಬ್ರೈನ್ ಕೇಂದ್ರದ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಸ್ಪರ್ಧೆಯಲ್ಲಿ ಒಟ್ಟು ೮೨೦೦ ಮಕ್ಕಳು ಭಾಗವಹಿಸಿದ್ದು, ಕೇವಲ ೩ ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದ ವಿದ್ಯಾರ್ಥಿಗಳು ಸಾಧನೆ ಮೆರೆದರು.

ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಸಾಧನೆಯ ಹೆಗ್ಗಳಿಕೆ ನಮ್ಮ ಕೇಂದ್ರದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸಲ್ಲಬೇಕು. ಈ ಅದ್ಭುತ ಯಶಸ್ಸಿಗೆ ಕಾರಣಕರ್ತರಾದ ಮಕ್ಕಳಿಗೆ ಹಾಗೂ ಮುತುವರ್ಜಿ ವಹಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ಚಾಂಪಿಯನ್ ಟ್ರೋಫಿ ವಿಜೇತರು: ಕನಿಷಾ ಸುನಿತ್ ಕುಮಾರ್, ನಿಲ್ಹಾ ಜೆ.ತಾರಕನ್, ಎ.ಎಲ್.ಪರೀಕ್ಷ, ಪಾವನಿ.ಕೆ.ಕುಂದರ್, ಕೆ.ಸಿ.ಆರಾಧ್ಯ, ಐಡೆನ್.ಜೆ.ತಾರಕನ್, ಎಸ್.ಎ.ಚಾರ್ವಿ ದೇಚಮ್ಮ, ದ್ರುಪದ್.ಪಿ.ಮಣಿಕೋಥ್, ಲಿವ್ಯ ಸುನಿತ್ ಕುಮಾರ್, ಎಂ.ಪಿ.ಯಾನ್ವಿ ಬೋಜಮ್ಮ, ಎ.ಆರ್.ಅಲುಫ್, ಜಾರ್ಜ್ ಮ್ಯಾಥಿವ್, ನಮನ್ ಎಂ.ಗೌಡ, ಮಿಯ ಅರುಣ್ ಚಾಂಪಿಯನ್ ಟ್ರೋಫಿ ವಿಜೇತರಾಗಿದ್ದಾರೆ.

ವೈ.ಡಿ.ಕುಶನ್ ದೇವಪ್ಪ, ಜೋನ್ನಾ ಮಡ್ತಾ, ಟಿಯ ಕಿಶೋರ್, ಎ.ಎಸ್.ರೋನಿತ್ ಗಣಪತಿ, ಆರನ್ ಅಲ್ಬರ್ಟ್, ಎನ್.ಆರ್.ರೈವತ್ ಪಟೇಲ್, ಸಿ.ವಿ.ಗಾನವಿ ಗಂಗಮ್ಮ, ಕೆ.ಆದಿತ್ ಗೌತಮ್ ಚಿನ್ನದ ಪದಕ ವಿಜೇತರಾದರೆ, ಎ.ಆರ್.ಅಲ್ಫಾ ಬೆಳ್ಳಿ ಪದಕ ವಿಜೇತರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಹಾಗೂ ಎಲ್ಲಾ ರಾಜ್ಯಗಳ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕರುಗಳು ಉಪಸ್ಥಿತರಿದ್ದರು.