ವಿವಿಧ ಕ್ರೀಡಾಕೂಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು.  
ಜಿಲ್ಲೆ

ಕುಂದಾಪುರ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಜನ್ನಾಡಿ: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ ವಿವಿಧ ಆಟಗಳಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದ ಐವರು ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕಬಡ್ಡಿ ಪಂದ್ಯಾದಲ್ಲಿ ಸುಜಯ್ ದೇವಾಡಿಗ, ಗಣೇಶ, ರೋಹನ್ ರಾಜ್ಯ ಮಟ್ಟಕ್ಕೆ, ಖೋ ಖೋ ಪಂದ್ಯಾಟದಲ್ಲಿ ಧನುಷ್ ಮತ್ತು ಸಾನಿಧ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಾಗಪ್ಪ ದಸರಾ ಕ್ರೀಡಾ ಕೂಟದಲ್ಲಿ ಜಿಲ್ಲಾಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಕ್ರೀಡಾ ಸಂಚಾಲಕರಾದ ಉದಯ ಕುಮಾರ್ ಶೆಟ್ಟಿ ಕಾಳಾವರ ಮತ್ತು ಪೂರ್ಣಿಮಾ ಪಿ.ನಾಯಕ್ ಉಪಸ್ಥಿತರಿದ್ದರು.