ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಂಗಳೂರಿನ ಕೆಂಗೇರಿ ಕ್ರೈಸ್ಟ್ ವಿಶ್ವವಿದ್ಯಾಲಯವು ಇತ್ತೀಚೆಗೆ ಆಯೋಜಿಸಿದ್ದ 2024- 25ನೇ ಸಾಲಿನ 38ನೇ ದಕ್ಷಿಣ ಪೂರ್ವ ವಲಯದ ಯುವ ಜನೋತ್ಸವದಲ್ಲಿ ನಗರದ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ವಿವಿಧ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. 18 ಕಂಚಿನ ಪದಕ, 4 ಟ್ರೋಫಿ ಹಾಗೂ 26 ಮೆರಿಟ್ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ.
ಮಾ. 3ರಿಂದ ಉತ್ತರ ಪ್ರದೇಶದ ನೋಯ್ಡಾದ ಅಮೇತಿ ವಿಶ್ವವಿದ್ಯಾಲಯದಲ್ಲಿ ನಡೆಯುವ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯ ಯುವ ಜನೋತ್ಸವದಲ್ಲಿ ಏಕವ್ಯಕ್ತಿ ಶಾಸ್ತ್ರೀಯ ವಾದ್ಯ, ಏಕವ್ಯಕ್ತಿ ಶಾಸ್ತ್ರೀಯ ಗಾಯನ, ಏಕವ್ಯಕ್ತಿ ಪಾಶ್ಚಾತ್ಯ ಗಾಯನ ಹಾಗೂ ಜಾನಪದ ವಾದ್ಯವೃಂದ ತಂಡವು ಭಾಗವಹಿಸಲಿದೆ.
ಸಾಧಕ ವಿದ್ಯಾರ್ಥಿಗಳನ್ನು ಕವಿವಿ ಪ್ರಭಾರ ಕುಲಪತಿ ಪ್ರೊ. ಜಯಶ್ರಿ ಎಸ್., ಪ್ರೊ. ಬಿ.ಎಂ. ಪಾಟೀಲ, ಪ್ರೊ. ಅರವಿಂದ ಮೂಲಿಮನಿ, ಕವಿವಿ ಹಣಕಾಸು ಅಽಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ. ಎಸ್.ಕೆ. ಪವಾರ, ಸ್ನಾತಕೋತ್ತರ ವಿದ್ಯಾರ್ಥಿ ಕೂಟದ ಅಧ್ಯಕ್ಷ ಪ್ರೊ. ಈಶ್ವರ್ ಬೈದರಿ, ಉಪಾಧ್ಯಕ್ಷ ಪ್ರೊ. ಚೇತನ್ ಹಾಗೂ ಯುವ ಜನೋತ್ಸವದ ವ್ಯವಸ್ಥಾಪಕರಾದ ಡಾ. ದಿನೇಶ ನಾರಾಯಣಕರ ಮತ್ತು ಪ್ರೊ. ಜ್ಯೋತಿ ಎಸ್. ಅಭಿನಂದಿಸಿದರು.