ಝಳಕಿ ವಿಭಾಗಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ಇಂಡಿ ತಾಲೂಕಿನ ಹಿಂಗಣಿ ಸರ್ಕಾರಿ ಶಾಲೆಯ ಕಬಡ್ಡಿ ತಂಡದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. ಎಸ್​ಡಿಎಂಸಿ ಅಧ್ಯಕ್ಷ ಅಂಬಣ್ಣ ಗುಬ್ಯಾಡ, ಪ್ರಭಾರ ಮುಖ್ಯ ಗುರು ಪ್ರಶಾಂತ ಕುರ್ಲೆ ಇತರರಿದ್ದಾರೆ. 
ಜಿಲ್ಲೆ

ಹಿಂಗಣಿ ಶಾಲೆ ಮಕ್ಕಳ ಸಾಧನೆ

ಗಿರೀಶ ಸಗರ

ಇಂಡಿ : ತಾಲೂಕಿನ ಹಿಂಗಣಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಇತ್ತೀಚೆಗೆ ಎಂಪಿಎಸ್​ ಹಾಗೂ ಕೆಜಿಎಸ್​ ಹಲಸಂಗಿ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಝಳಕಿ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಶಾಲೆಯ ಬಾಲಕಿಯರ ಕಬಡ್ಡಿ ತಂಡ (ಪ್ರಥಮ) ಉದ್ದ ಜಿಗಿತದಲ್ಲಿ ಅಲ್ಫಿಯಾ ಜವಳಗಿ (ಪ್ರಥಮ), ಚಕ್ರ ಎಸೆತದಲ್ಲಿ ಮಂಜುನಾಥ ಪ್ಯಾಟಿ (ಪ್ರಥಮ), ಬಾಲಕರ 600 ಮೀ. ಓಟದಲ್ಲಿ ಆದರ್ಶ ಕೋಳಿ (ದ್ವೀತಿಯ) ಉತ್ತಮ ಸಾಧನೆ ಮಾಡಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಎಸ್​ಡಿಎಂಸಿ ಅಧ್ಯಕ್ಷ ಅಂಬಣ್ಣ ಗುಬ್ಯಾಡ, ಪ್ರಭಾರ ಮುಖ್ಯ ಗುರು ಪ್ರಶಾಂತ ಕುರ್ಲೆ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.