ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಸ್. ಕಲ್ಲೂರಮಠ ಅಥ್ಲೆಟಿಕ್ ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು. ಡಾ. ರಾಜಶೇಖರ ಬೆನಕನಹಳ್ಳಿ ಇತರರಿದ್ದಾರೆ. 
ಜಿಲ್ಲೆ

ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸರ್ಕಾರಿ ಮಹಿಳಾ ಕಾಲೇಜ್ ಸಾಧನೆ

ವಿಜಯಪುರ: ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ 17ನೇ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ.

ಬಿಎ 3ನೇ ಸೆಮಿಸ್ಟರ್ ಕಲಿಯುತ್ತಿರುವ ಪೂಜಾ ಠಾಕೂರ ಜಾವಲಿನ್ ಥ್ರೋ (ಬರ್ಚಿ ಎಸೆತ) ದಲ್ಲಿ 27.33 ಮೀಟರ್ ಎಸೆದು ಬಂಗಾರದ ಪದಕ ವಿಜೇತರಾದರೆ, 20 ಕಿಮೀ ನಡುಗೆ ಸ್ಪರ್ಧೆಯಲ್ಲಿ ದೀಪಾ ಚವಾಣ ಕಂಚಿನ ಪದಕ ಜತೆಗೆ 3ನೇ ಸ್ಥಾನ ಹಾಗೂ ಲಕ್ಷ್ಮಿ ಕ್ಷತ್ರಿ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಪ್ರಾಚಾರ್ಯ ಡಾ. ಆರ್.ಎಸ್. ಕಲ್ಲೂರಮಠ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಜಶೇಖರ ಬೆನಕನಹಳ್ಳಿ, ಐಕ್ಯೂಎಸಿ ಸಂಯೋಜಕ ಡಾ. ಚಿದಾನಂದ ಎಸ್. ಆನೂರ, ಬೋಧಕೇತರ, ಸಮಿತಿಯ ಸದಸ್ಯರು ಸಾಧಕ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.