ಮಡಿಕೇರಿ: ಕರ್ನಾಟಕ ಸ್ಫೋರ್ಟ್ಸ್ ಮತ್ತು ಆರ್ಟ್ಸ್ ಅಕಾಡೆಮಿ ವತಿಯಿಂದ ಬೆಂಗಳೂರಿನ ಬಿನ್ನಿಪೇಟೆಯ ಡೆಕತ್‌ಲಾನ್ ಇಟಿಎ ಮಹಲ್‌ನಲ್ಲಿ ಇತ್ತೀಚೆಗೆ ನಡೆದ ಅಂತರಾಜ್ಯ ಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಬಾರನ ಬಿಂಬಿತ್ ಗೌಡ ೨ ಚಿನ್ನ, ಬೊಮ್ಮುಡಿ ದೇವಿಶ್ರೀ ಪ್ರಭಾಕರ್ ೨ ಚಿನ್ನ, ಬಾರನ ಪ್ರೇಕ್ಷಿತ್ ಗೌಡ ೧ ಚಿನ್ನ, ೧ ಕಂಚು, ಆರ್.ಲೋಹಿತ್ ೧ ಚಿನ್ನ, ೧ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮುಡ್ಯನ ಗೌರವ್ ಯೋಗೀಶ್ ೨ ಬೆಳ್ಳಿ, ತೇಜಸ್ ರಾಜು ೨ ಬೆಳ್ಳಿ, ಜಿ.ಎಂ.ಮನೀಶ್ ನಾಥ್ ೨ ಬೆಳ್ಳಿ, ಪಿ.ದೃಪದ್ ಮಣಿಕೋತ್ ೧ ಬೆಳ್ಳಿ, ೧ ಕಂಚು, ಎಂ.ವಿ.ಕಿಶನ್ ೧ ಬೆಳ್ಳಿ, ೧ ಕಂಚು, ಕಿರಣ್ ಕಾಂತ್ ೨ ಕಂಚು, ಜಿ.ಎಂ.ಮಿನ್ ಶಾ ೨ ಕಂಚಿನ ಪದವನ್ನು ಗೆದ್ದುಕೊಂಡಿದ್ದಾರೆ.
ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ.ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.