ವಿಜಯಪುರ: ತೆಲಂಗಾಣ ರಾಜ್ಯದ ನಿಜಾಮಾಬಾದದಲ್ಲಿ ಸೆ. 14 ರಂದು ನಡೆದ ಖೇಲೋ ಇಂಡಿಯಾ ವುಮೆನ್ ಲೀಗ್ ಸೈಕ್ಲಿಂಗ್ ಚಾಂಪಿಯನ್ಶಿಪ್ನ 18 ವರ್ಷದ ಬಾಲಕಿಯರ ವಿಭಾಗದಲ್ಲಿ ನಗರದ ಬಿಎಲ್ಡಿಇ ಕೆಸಿಪಿ ಕಾಲೇಜಿನ ವಿದ್ಯಾರ್ಥಿನಿ ಪಾಯಲ್ ಚೌಹಾಣ್ ಪ್ರಥಮ ಸ್ಥಾನ ಮತ್ತು 16 ವರ್ಷದ ಬಾಲಕಿಯರಲ್ಲಿ ಕೋಕಿಲ ಚೌಹಾನ್ ಪ್ರಥಮ, ದೀಪಿಕಾ ಪಡತಾರೆ ದ್ವೀತಿಯ ಹಾಗೂ ಜ್ಯೋತಿ ರಾಠೋಡ ತೃತೀಯ ಸ್ಥಾನ ಪಡೆದಿದ್ದಾರೆ.
ಸೆ. 15 ರಂದು ನಡೆದ 18 ವರ್ಷದ ಬಾಲಕಿಯರ ವಿಭಾಗದಲ್ಲಿ ರೋಡ್ರೇಸ್ನಲ್ಲಿ ಕೂಡ ಪಾಯಲ್ ಚೌಹಾಣ್ ಪ್ರಥಮ ಸ್ಥಾನ ಪಡೆದಿದ್ದು, 16 ವರ್ಷದ ಬಾಲಕಿಯರಲ್ಲಿ ದೀಪಿಕಾ ಪಡತಾರೆ ಪ್ರಥಮ, ಗಾಯತ್ರಿ ಕಿತ್ತೂರ ದ್ವೀತಿಯ ಮತ್ತು ಕೋಕಿಲ ಚೌಹಾನ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕ್ರೀಡಾ ಪಡುಗಳಿಗೆ ಅಲ್ಕಾ ಪಡತಾರೆ, ಅನಂತ ದೇಸಾಯಿ ಮತ್ತು ರಮೇಶ ರಾಠೋಡ ತರಬೇತಿ ನೀಡಿದರು.