ಕಲಬುರಗಿಯಲ್ಲಿ ನಡೆದ ಕಲಬುರಗಿ ವಲಯ ಮಟ್ಟದ ಮಹಿಳಾ ಟೇಬಲ್​ ಟೆನಿಸ್​ ಪಂದ್ಯಾವಳಿಯಲ್ಲಿ ದ್ವೀತಿಯ ಸ್ಥಾನ ಪಡೆದ ವಿಜಯಪುರದ ಎವಿಎಸ್​ ಆಯುರ್ವೇದ ಕಾಲೇಜಿನ ಪೃಥ್ವಿ ಸಿದರೆಡ್ಡಿ, ಶ್ರೇಯಾ ರೆಡ್ಡಿ ಮತ್ತು ಅರ್ಪಿತಾ ದೇಶಪಾಂಡೆ, ವಿದ್ಯಾರ್ಥಿನಿಯರು. 
ಜಿಲ್ಲೆ

ಎವಿಎಸ್​ ಕಾಲೇಜಿನ ಸಾಧನೆ

ವಿಜಯಪುರ: ನಗರದ ಬಿಎಲ್​ಡಿಇ ಸಂಸ್ಥೆಯ ಎವಿಎಸ್​ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯರು ಕಲಬುರಗಿಯಲ್ಲಿ ಆ. 27 ರಂದು ನಡೆದ ರಾಜೀವ ಗಾಂಧಿ ಆರೋಗ್ಯ ವಿಾನಗಳ ವಿಶ್ವವಿದ್ಯಾಲಯ ಕಲಬುರಗಿ ವಲಯ ಮಟ್ಟದ ಮಹಿಳಾ ಟೇಬಲ್​ ಟೆನಿಸ್​ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.

ಕಲಬುರಗಿಯ ಟಿಪ್ಪು ಸುಲ್ತಾನ್​ ಯುನಾನಿ ಮೆಡಿಕಲ್​ ಕಾಲೇಜಿನಲ್ಲಿ ನಡೆದ ಮಹಿಳಾ ಟೇಬಲ್​ ಟೆನಿಸ್​ ಪಂದ್ಯದಲ್ಲಿ ಎವಿಎಸ್​ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯರಾದ ಪೃಥ್ವಿ ಸಿದರೆಡ್ಡಿ, ಶ್ರೇಯಾ ರೆಡ್ಡಿ ಮತ್ತು ಅರ್ಪಿತಾ ದೇಶಪಾಂಡೆ ದ್ವೀತಿಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ, ದೈಹಿಕ ನಿರ್ದೇಶಕ ಹಣಮಂತ ಪವಾರ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.