ಹಗರಿಬೊಮ್ಮನಹಳ್ಳಿ ತಾಲೂಕಿನ ಮುಟುಗನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿದರು. ಪ್ರಮುಖರಾದ ನೇತ್ರಾನಂದಪ್ಪ, ಮುಟುಗನಹಳ್ಳಿ ಕೊಟ್ರೇಶ, ಹನುಮಂತಪ್ಪ ಕನ್ನೀರಪ್ಪನವರ ಇತರರಿದ್ದರು. 
ಜಿಲ್ಲೆ

ಒಗ್ಗಟ್ಟಿನ ಶ್ರಮಕ್ಕೆ ಸಾಧನೆ ಪ್ರತಿಫಲ

ಹಗರಿಬೊಮ್ಮನಹಳ್ಳಿ: ಒಗ್ಗಟ್ಟಿನ ಶ್ರಮಕ್ಕೆ ಯಶಸ್ಸು, ಸಾಧನೆ ಎನ್ನುವ ಪ್ರತಿಫಲ ನಮ್ಮ ಮುಂದೆ ಇರುತ್ತೆ ಎಂದು ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಹೇಳಿದರು.

ತಾಲೂಕಿನ ಮುಟುಗನಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದೇವಾಲಯ ಉದ್ಘಾಟನೆ ಹಾಗೂ ಶ್ರೀ ದುರ್ಗಾಂಬಿಕಾ ದೇವಿ, ಶ್ರೀ ಮರಿಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲವರ್ಷಗಳ ಹಿಂದೆ ಪರಸ್ಪರ ವ್ಯತ್ಯಾಸದಿಂದ ಗ್ರಾಮದ ವಾತಾವರಣ ಹದಗೆಟ್ಟಿತ್ತು. ಆದರೆ, ಇಂದು ದೇವಸ್ಥಾನ ನಿರ್ಮಾಣ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೋರುತ್ತಿರುವ ಆಸಕ್ತಿಯಿಂದ ಸಮುದಾಯ ನೆಮ್ಮದಿಯಿಂದ ನೆಲೆಸಿದೆ. ಇದಕ್ಕೆ ದುರ್ಗಾಂಬಿಕಾ ಮಾತೆಯ ಆಶೀರ್ವಾದವಿದೆ ಎಂದರು.

ವಕೀಲ ಎಂ.ಯೋಗೇಶ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡಿದರೆ, ಸಂಸ್ಕಾರ ತಾನಾಗಿಯೇ ಬೆಳೆಯುತ್ತದೆ ಎಂದರು.

ಗ್ರಾಮಸ್ಥ ನೇತ್ರಾನಂದಪ್ಪ ಮಾತನಾಡಿ, ಗ್ರಾಮದಲ್ಲಿ ದುರ್ಗಾಂಬಿಕಾದೇವಿ ನೆಲೆಸಿದ ಇತಿಹಾಸವಿದೆ. ವಿವಿಧೆಡೆ ನಾನಾ ಹೆಸರುಗಳಿಂದ ನೆಲೆಸಿದ್ದು, ಭಕ್ತರನ್ನು ಕಾಪಾಡುತ್ತಿದ್ದಾಳೆ. ಇದಕ್ಕೆ ಶ್ರೀ ದುರ್ಗಾಂಬಿಕಾ ದೇವಿಯ ಭವ್ಯ ದೇಗುಲವೇ ಸಾಕ್ಷಿಯಾಗಿದೆ ಎಂದರು.

ಹೋಮ, ವಿಶೇಷ ಪೂಜೆಗಳೊಂದಿಗೆ ಶ್ರೀ ದುರ್ಗಾಂಬಿಕಾ ದೇವಿ ಮತ್ತು ಮರಿಯಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಾಲಯಗಳ ಲೋಕಾರ್ಪಣೆ ಜರುಗಿತು.

ಪ್ರಮುಖರಾದ ಎನ್.ಚಂದ್ರಪ್ಪ, ಕನಕಪ್ಪ, ಕನಿಕೇರಿ ಬಸವರಾಜ, ಹನುಮಂತ ಕನ್ನೀರಪ್ಪನವರ, ದೊಡ್ಡಬಸಪ್ಪ, ಮಾಸ್ತಿ ರಾಮಪ್ಪ, ಗೌಡ್ರು ಪರಸಪ್ಪ, ಕೊಂಗಾಲಿ ಪರಸಪ್ಪ, ದಿಡಿಗೆಪ್ಪ, ಎಂ.ಉಮೇಶ, ಎಂ.ಬಸವರಾಜ, ಎಚ್.ದುರುಗಪ್ಪ, ಎಚ್.ಬಸವರಾಜ, ಕೆ.ಚನ್ನಬಸಜ್ಜ, ವಕೀಲ ಸಂತೋಷ, ಗಿರಿಗೌಡ್ರು ಹುಲುಗಪ್ಪ, ಹನುಮನಗೌಡ, ಚನ್ನಗೌಡ್ರು ಈರಪ್ಪ, ಹ್ಯಾಟಿ ಅಶೋಕ, ಸೊಬಟಿ ಸಂಗಪ್ಪ, ಶುಕ್ಲಚಾರಿ, ಶಿಕ್ಷಕರಾದ ನಾಗರಾಜ, ಗಂಗಾಧರ ಇತರರಿದ್ದರು.