ವಿಜಯಪುರದ ಟಕ್ಕೆಯಲ್ಲಿರುವ ಪಿ.ಎಂ. ಕೇಂದ್ರೀಯ ವಿದ್ಯಾಲಯದಲ್ಲಿ 62ನೇ ಸಂಸ್ಥಾಪನಾ ದಿನ ಆಚರಿಸಲಾಯಿತು. ಚಂದನ ಝಾ, ಪ್ರಾಚಾರ್ಯ ಜುನಾರಾಮ, ಸಂತೋಷ ಹಲವಾಯಿ ಮತ್ತಿತರರಿದ್ದಾರೆ. 
ಜಿಲ್ಲೆ

ಪ್ರಯತ್ನದಿಂದ ಸಾಧನೆ ಸಾಧ್ಯ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಹಲವರು ದೇಶದ ವಿವಿಧ ಭಾಗಗಳಲ್ಲಿ ಹಲವು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದು ರೈಲ್ವೆ ಇಲಾಖೆಯ ಚಂದನ ಝಾ ಹೇಳಿದರು.

ನಗರದ ಟಕ್ಕೆಯಲ್ಲಿರುವ ಪಿ.ಎಂ. ಕೇಂದ್ರೀಯ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 62ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಸತತ ಪ್ರಯತ್ನದೊಂದಿಗೆ ಅತ್ಯುತ್ತಮ ಸಾಧನೆಗೈಯಬೇಕು. ಜೀವನದಲ್ಲಿ ಉನ್ನತ ಸ್ಥಾನಕ್ಕೆರುವ ಮೂಲಕ ತಾವು, ತಮ್ಮ ಕುಟುಂಬ, ಸಮಾಜ, ವಾಸವಿರುವ ಸ್ಥಳ, ರಾಜ್ಯ, ದೇಶದ ಗೌರವ ಹೆಚ್ಚಿಸುವಂತೆ ಸಲಹೆ ನೀಡಿದರು.

ಪ್ರಾಚಾರ್ಯ ಜುನಾರಾಮ ಮಾತನಾಡಿದರು. ಶಿಕ್ಷಕ ಸಂತೋಷ ಹಲವಾಯಿ, ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಶೃತಿ ಶೀಳಿನ, ಅನಂತ ಪದ್ಮನಾಭನ್, ಸುಂದ್ರೇಶ ಉಮದಿ, ವಿರೇಶ ಡಂಬಳ, ಕಲ್ಯಾಣಿ ಕಾಳೆ, ಪಿಯುಶ್ ದೀಕ್ಷಿತ, ಚಿನ್ನು ಗುಪ್ಪಾ, ವೈಷ್ಣವಿ ಚೂರಿ ಮತ್ತಿತರರಿದ್ದರು.

ಅನಾಮಿಕ ಕುಮಾರಿ ನಿರೂಪಿಸಿದರು.