ಜಿಲ್ಲೆ

ನಿರಂತರ ಶ್ರಮ, ಶ್ರದ್ಧೆಯಿಂದ ಸಾಧನೆ ಸಾಧ್ಯ

ಜಿ.ಹೆಚ್. ಧನ್ಯಕುಮಾರ್

ಶೃಂಗೇರಿ: ವಿದ್ಯಾರ್ಥಿ ಜೀವನದ ಪ್ರಮುಖ ಹಂತವಾಗಿರುವ ಎಸ್‌ಎಸ್‌ಎಲ್‌ಸಿಯಲ್ಲಿ ಶ್ರದ್ಧೆಯಿಂದ ಓದಿಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಜೆಸಿಐ ಪೂರ್ವಧ್ಯಕ್ಷ ಉಳುವೆ ಗಿರೀಶ್ ಹೇಳಿದರು.

ಪಟ್ಟಣದ ಶ್ರೀಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್‌ಏರ್ಪಡಿಸಿದ್ದ ವಿದ್ಯಾರ್ಥಿ

ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಮಹತ್ವದ ಬಗ್ಗೆ ಉಪನ್ಯಾಸ ನೀಡಿ, ನಮ್ಮ ಮುಂದೆ ಸಾಧನೆ ಮಾಡಿಎತ್ತರಕ್ಕೆ ಏರಿದ ಅನೇಕರು ಇದ್ದಾರೆ. ಅವರೆಲ್ಲರ ಸಾಧನೆ ಒಂದು ದಿನದಲ್ಲಿಗಳಿಸಿರುವುದಲ್ಲ. ನಿರಂತರಶ್ರಮ, ಶ್ರದ್ಧೆ, ಪ್ರಾಮಾಣಿಕತೆಯಿಂದ ಸಾಧನೆ ಮಾಡಿದ್ದಾರೆ ಎಂದರು.

ವಿದ್ಯಾರ್ಥಿಗಳಾದ ನೀವು ಶ್ರೇಷ್ಠ ಕನಸು ಕಾಣಬೇಕು. ಕನಸನ್ನು ನನಸಾಗಿಸಲು ಪಣ ತೊಡಬೇಕು.ಪ್ರಾಥಮಿಕ ಹಂತದ ಶಿಕ್ಷಣದಿಂದ ಆರಂಭವಾಗುವ ಶೈಕ್ಷಣಿಕ ಪದ್ಧತಿಯಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖಘಟ್ಟವಾಗಿದೆ. ಆಧುನಿಕತೆಯಲ್ಲಿ ಬರುವ ಸೋಷಯಲ್ ಮೀಡಿಯಾ ಸಹಿತ ಎಲ್ಲ ಹೊಸತಂತ್ರಜ್ಞಾನದಲ್ಲಿ ಒಳ್ಳೆಯದು ಇದೆ. ಅದೇ ರೀತಿ ಕೆಡುಕು ಇದೆ. ನಾವು ಒಳ್ಳೆಯದನ್ನು ಸ್ವೀಕರಿಸಿಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಪ್ರಿಯದರ್ಶಿನಿ ಹೆಗ್ಡೆ ಮಾತನಾಡಿ, ಶ್ರದ್ಧೆ, ಗುರು ಭಕ್ತಿ ಇದ್ದಾಗ ಶಿಕ್ಷಣದಲ್ಲಿಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಯಾವುದೇ ವಿಷಯವನ್ನು ಮನನ ಮಾಡಿಕೊಳ್ಳಬೇಕಾದರೆಬರೆದಿಟ್ಟುಕೊಳ್ಳವ ಅಭ್ಯಾಸ ಮಾಡಬೇಕು ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಬೆಳಗ್ಗೆ ಬೇಗ ಎದ್ದು ಓದುವುದು, ಸಾಧ್ಯವಾದಷ್ಟುಬರೆದು ಕಲಿಯುವುದು ಉತ್ತಮ ಅಂಕಗಳಿಕೆಗೆ ಸಹಾಯಕವಾಗುತ್ತದೆ ಎಂದರು. ಶಾಲಾಮುಖ್ಯ ಶಿಕ್ಷಕಸಂತೋಷ್ ಕುಮಾರ್, ಕೆ.ಎಲ್.ಗೋಪಾಲಕೃಷ್ಣ, ರೋಟರಿ ಕ್ಲಬ್‌ನ ಸೌಮ್ಯಕುಮಾರ್, ಸುರೇಶ್ ಹೆಗ್ಡೆ,ಅಶ್ವಿನಿ, ಟಿ.ಎಸ್.ಮನೋಜ್, ಗಾಯನ ಇದ್ದರು.