ತೇರದಾಳ: ಆಧುನಿಕ ತಾಂತ್ರಿಕ ಜಗತ್ತಿನ ಇಂದಿನ ದಿನಗಳಲ್ಲಿ ಮಹಿಳೆ ನಾಲ್ಕು ಗೋಡೆ ಮಧ್ಯೆ ಕುಳಿತುಕೊಳ್ಳುವ ಕಾಲ ಕಳೆದು ಹೋಗಿದೆ. ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿದ್ದು, ನಿಶ್ಚಿತ ಗುರಿ ಹಾಗೂ ನಿರಂತರ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದು ಮಿಸೆಸ್ ಇಂಡಿಯಾ ಪುರಸ್ಕೃತೆ ಹೇಮಲತಾ ನಿರಂಜನ್ ಹೇಳಿದರು.
ಸ್ಥಳೀಯ ದಾನಿಗೊಂಡ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಸಂಸ್ಥೆಯಲ್ಲಿ ಶುಕ್ರವಾರ ಇನ್ಫೋಸಿಸ್ ಫೌಂಡೇಷನ್ ಹಾಗೂ ಮಹಾಲಕ್ಷ್ಮೀ ಮಹಿಳಾ ಮಂಡಳದ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ತರಬೇತಿ ಮತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಅನಂತಮತಿ ಯಂಡೋಳ್ಳಿ ಮಾತನಾಡಿ, ಮಹಿಳೆಯರು ಆರ್ಥಿಕ ಸ್ವಾವಲಂಬನೆ ಜತೆಗೆ ದೈಹಿಕ, ಸಾಮಾಜಿಕವಾಗಿ ಸಬಲರಾಗಿ ಕೌಟುಂಬಿಕ ಪ್ರಗತಿಯಲ್ಲಿ ತಮ್ಮದೆ ಆದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು. ಡಾ. ಪುಷ್ಪದಂತ ದಾನಿಗೊಂಡ, ಡಾ. ಮಧುರಾ ಪಿ. ದಾನಿಗೊಂಡ ಮಾತನಾಡಿದರು.
ನಾರಾಯಣ ಕುಲಕರ್ಣಿ, ರಾಜು ಪರೀಟ, ಪ್ರಾಚಾರ್ಯ ಡಾ. ಪಿ.ಬಿ. ಅಪರಾಜ, ಡಾ. ಪೂರ್ಣಿಮಾ ಹುಂಡಿ, ಅಶ್ವಿನಿ ನಾಯ್ಕರ, ಮೀನಾಕ್ಷಿ ಸುಲದಾಳ ಇದ್ದರು.