ಜಿಲ್ಲೆ

ಕಲಿಕೆಯಲ್ಲಿ ಆಸಕ್ತಿ ಇದ್ದರೆ ಸಾಧನೆ ಸಾಧ್ಯ

ಜಿ.ಹೆಚ್. ಧನ್ಯಕುಮಾರ್

ಚೌಳಹಿರಿಯೂರು: ವಿದ್ಯಾರ್ಥಿಗಳಿಗೆ ಕಲಿಯುವ ಇಚ್ಛಾಶಕ್ತಿ ಇದ್ದರೆ ಮಾತ್ರ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ ಎಂದು ದತ್ತಿನಿಧಿ ಸಮಿತಿ ಅಧ್ಯಕ್ಷ ಜಿ.ಅಶೋಕ್ ಕುಮಾರ್ ಹೇಳಿದರು.

ಸ್ಥಳೀಯ ಕೆಪಿಎಸ್ ಶಾಲೆ ಆವರಣದಲ್ಲಿ ದತ್ತಿನಿಧಿ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿಧ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, 24-25ನೇ ಸಾಲಿನಲ್ಲಿ 7, 10, 12 ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಸಲುವಾಗಿ 2007ರಲ್ಲಿ ದತ್ತಿ ನಿಧಿ ಆರಂಭಿಸಲಾಯಿತು. ಈವರೆಗೆ 3 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿ ನಿಗದಿತ ಠೇವಣಿ ಹಾಕಿ ಬರುವ ಬಡ್ಡಿ ಹಣದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ಇತ್ತಿಚೆಗೆ ಚುನಾಯಿತ ಪ್ರತಿನಿಧಿಗಳಿಗೆ ಸರ್ಕಾರಿ ಶಾಲೆಗಳ ಮೇಲೆ ಆಸಕ್ತಿ ಕಡಿಮೆಯಾಗಿದೆ. ಲಿತಾಂಶದಲ್ಲಿ ತಾಲೂಕಿಗೆ ಎರಡನೇ ಸ್ಥಾನ ಪಡೆದಿದ್ದರೂ ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗುತ್ತಿದೆ. ಶಾಲಾ ಸಮಯಕ್ಕೆ ಬಸ್‌ಸೌಕರ್ಯ ಇಲ್ಲದಿರುವುದು, ಕಾಲೇಜ್ ಹಾಸ್ಟಲ್, ಶಿಕ್ಷಕರ ಕೊರತೆಯಿಂದ ಪ್ರವೇಶ ಕಡಿಮೆಯಾಗಿದೆ ಎಂದರು.

ವರ್ಗಾವಣೆಗೊಂಡ ಪ್ರಭಾರ ಪ್ರಾಚಾರ್ಯ ಆರ್.ತಮ್ಮಯ್ಯ ದತ್ತಿನಿಧಿಗೆ ಐದು ಸಾವಿರ ರೂ. ನೀಡಿದರು. ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಗೀತಾ, ಜೆ.ರಮ್ಯ, ದಿವ್ಯಾ, ವಿನುತಾ, ಆರ್.ಪವನ್, ಬಿ.ಕೆ.ಕವನ, ಬಿ.ವಿ.ಗಗನ. ಹೆಚ್.ಎಮ್.ಧನುಷ್, ಸಿ.ಜೆ.ಪರಮೇಶ್, ಹೆಚ್.ಆರ್.ಗೀತಾ, ಅಯ್ಯಪ್ಪ, ಎ.ಎಲ್.ಪ್ರೇಕ್ಷಾ, ವೈ.ಡಿ.ಭೂಮಿಕಾ, ಸಿ.ಜೆ.ಕೃತಿಕಾ, ಎ.ವಿ.ಚಾರಿತ್ರ, ವಿ.ಹೆಚ್.ಕಲ್ಲೇಶ್‌ರನ್ನು ಸನ್ಮಾನಿಸಲಾಯಿತು.

ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಹೆಚ್.ಎಮ್.ರುದ್ರೇಶ್, ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜ್, ಆಲದಹಳ್ಳಿ ಓಂಕಾರಪ್ಪ, ಎಸ್.ಟಿ.ಮೋಹನ್ ಕುಮಾರ್, ಶಿವಕುಮಾರ್, ಯಶವಂತ್, ಹೆಚ್.ಎಸ್.ಚಂದ್ರಪ್ಪ, ಹೆಚ್.ಪಿ.ಓಂಕಾರ, ಜಿ.ಬಿ.ಓಂಕಾರಪ್ಪ , ಸುರೇಶ್ ಉಪಸ್ಥಿತರಿದ್ದರು.