ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸ್ಕೂಲ್ ಗೇಮ್ಸಫೆಡರೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ನಗರದ ದಿ ಗ್ಲೋಬಲ್ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ವಿದ್ಯಾರ್ಥಿಗಳು 6 ಚಿನ್ನದ ಪದಕ ಹಾಗೂ 1 ಕಂಚಿನ ಪದಕ ಗೆದ್ದಿದ್ದಾರೆ
ವೈಯಕ್ತಿಕ ವಿಬಾಗದಲ್ಲಿ ವೇದ ಪಿ.ಆರ್., ಎನ್ಶುರೆನ್ಸ್ನಲ್ಲಿ ಚಿನ್ನದ ಪದಕ, ಪೃಥ್ವಿರಾಜ ಜೆ.ಬಿ. ಸ್ಪೀಡ್ ಸ್ಪ್ರಿಂಟ್ ಚಿನ್ನ, ಗೌತಮಿ ಆರ್.ಬಿ. ಒನ್ ಲೆಗ್ ಸ್ವಿಚ್ ಚಿನ್ನ, ಮುಕ್ತಿ ಕೆ.ಪಿ. ಸ್ಪೀಡ್ ಸ್ಪಿ ್ರಂಟ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಗುಂಪು ವಿಭಾಗದ ಡಬಲ್ ಡಚ್‌ನಲ್ಲಿ ವೇದ ಪಿ.ಆರ್. ಮತ್ತು ಪೃಥ್ವಿರಾಜ ಜೆ.ಬಿ, ಹಿತೇನ ಕೆ.ಪಿ. ಕಾರ್ತಿಕ ಎ.ಕೆ. ಚಿನ್ನದ ಪದಕ ಪಡೆದಿದ್ದಾರೆ. ಫ್ರಂಟ್ ಟು ಫ್ರಂಟ್ ಸ್ಪರ್ಧೆಯಲ್ಲಿ ಮುಕ್ತಿ ಕೆ.ಪಿ. ಕಂಚಿನ ಪದಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ತರಬೇತುದಾರ ಮೈತ್ರಾ ಬನ್ನಿಕೊಪ್ಪ, ಸಂಸ್ಥೆಯ ಚೇರ್ಮನ್ ಬಸವರಾಜ ಕೌಲಗಿ, ಆಡಳಿತಾಽಕಾರಿ ಶಿವಾನಂದ ಬಿರಾದಾರ ಹಾಗೂ ಜಿಲ್ಲಾ ದೈಹಿಕ ಶಿಕ್ಷಣಾಽಕಾರಿ ವಿಷ್ಣು ಹೆಬ್ಬಾರ ಅಭಿನಂದಿಸಿದ್ದಾರೆ.