ನಿವಿಯಸ್ ಮ್ಯಾರಥಾನ್‌ನಲ್ಲಿ ಪದಕ ವಿಜೇತ ವಿದ್ಯಾರ್ಥಿಗಳು. 
ಜಿಲ್ಲೆ

ನಿವಿಯಸ್ ಮ್ಯಾರಥಾನ್‌ನಲ್ಲಿ ಸಾಧನೆ

ಇಂದಿರಾ ಎನ್ ಕೆ

ಕಾರ್ಕಳ: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ನಿವಿಯಸ್ ಮ್ಯಾರಥಾನ್‌ನಲ್ಲಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಹದಿನೆಂಟು ಕ್ರೀಡಾಪಟುಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

5 ಕಿ.ಮೀ ಜೂನಿಯರ್ ಬಾಲಕರ ವಿಭಾಗದಲ್ಲಿ ಡಾ.ಎನ್‌ಎಸ್‌ಎಎಂ ಆಂಗ್ಲ ಮಾಧ್ಯಮ ಶಾಲೆಯ ರಕ್ಷಿತ್ ಚಿನ್ನದ ಪದಕ, 2.5 ಕಿ.ಮೀ ಜೂನಿಯರ್ ಬಾಲಕರ ವಿಭಾಗದಲ್ಲಿ ರಷಭ್ ಕಂಚಿನ ಪದಕ, ಜೆಸ್ತಾ ಅವರು 10 ಕಿ.ಮೀ ಜೂನಿಯರ್ ಬಾಲಕರ ವಿಭಾಗದಲ್ಲಿ ಚಿನ್ನದ ಪದಕ, 4.5 ಕಿ.ಮೀ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಡಾ.ಎನ್‌ಎಸ್‌ಎಎಂ ಪ್ರೌಢಶಾಲೆಯ ದೀಪಿಕಾ ಚಿನ್ನದ ಪದಕ, 5ಕಿ.ಮೀ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಸ್ತುತಿ ಬೆಳ್ಳಿ ಪದಕ, ಸರ್ಕಾರಿ ಪ್ರಾಥಮಿಕ ಶಾಲೆಯ ಮಾನ್ವಿ 5 ಕಿ.ಮೀ ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ, 5ಕಿ.ಮೀ ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಡಾ.ಎನ್‌ಎಸ್‌ಎಎಂ ಆಂಗ್ಲ ಮಾಧ್ಯಮ ಶಾಲೆಯ ಖುಷಿ ಬೆಳ್ಳಿ ಪದಕ, ಡಾ.ಎನ್‌ಎಸ್‌ಎಎಂ ಪ್ರಥಮದರ್ಜೆ ಕಾಲೇಜಿನ ಪ್ರತೀಕ್ಷಾ 5 ಕಿ.ಮೀ ಮುಕ್ತ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ, ಡಾ.ಎನ್‌ಎಸ್‌ಎಎಂ ಪ್ರಥಮದರ್ಜೆ ಕಾಲೇಜಿನ ನಂದಿನಿ ಜಿ. 21 ಕಿ.ಮೀ ಮ್ಯಾರಥಾನ್ ಮುಕ್ತ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಎನ್.ಇ.ಟಿ ಅಥ್ಲೀಟ್ ಭುವನ್ 5 ಕಿ.ಮೀ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.