ಭಟ್ಕಳ: ಪಟ್ಟಣದ ಅಮೀನಾ ಪ್ಯಾಲೇಸ್ನಲ್ಲಿ ಅಮರ್ ಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಓಪನ್ ನ್ಯಾಶನಲ್ ಲೆವಲ್ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್ ಮತ್ತು ಫಿಟ್ನೆಸ್ ಅಕಾಡೆಮಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ.
ವೈಟ್ ಬೆಲ್ಟ್ ಕಟಾ ಮತ್ತು ಫೈಟ್ ವಿಭಾಗದಲ್ಲಿ ಸಿರಿ ಸಂತೋಷ ನಾಯ್ಕ ಚಿನ್ನ ಮತ್ತು ಬೆಳ್ಳಿ ಪದಕ, ಗುರುತೇಜ್ ರಾಘವೇಂದ್ರ ನಾಯ್ಕ ಚಿನ್ನದ ಪದಕ, ಭಾನುಶ್ರೀ ಅಶೋಕ ನಾಯ್ಕ ಚಿನ್ನ ಮತ್ತು ಕಂಚಿನ ಪದಕ, ಜ್ಯೋತಿ ನಾಯ್ಕ ಕಂಚಿನ ಪದಕ ಪಡೆದಿದ್ದಾರೆ.
ಎಲ್ಲೊ ಬೆಲ್ಟ್ ವಿಭಾಗದಲ್ಲಿ ಅಥರ್ವ ನಾಯ್ಕ ಚಿನ್ನದ ಪದಕ, ಅರ್ಹಾನ್ ಎರಡು ಕಂಚಿನ ಪದಕ, ಚಿರಂತ್ ನಾಯ್ಕ ಕಂಚಿನ ಪದಕ, ಸಂಜನಾ ಗೊಂಡ ಎರಡು ಕಂಚಿನ ಪದಕ ಪಡೆದಿದ್ದಾರೆ. ಆರೆಂಜ್ ಬೆಲ್ಟ್ ವಿಭಾಗದಲ್ಲಿ ಆಯುಷ್ಮಾನ್ ಶೆಟ್ಟಿ, ಅಥರ್ವ ಮಂಜುನಾಥ ಗೊಂಡ ಬೆಳ್ಳಿ ಮತ್ತು ಕಂಚಿನ ಪದಕ, ದಿರಾ ಕಿರಣ್ ನಾಯ್ಕ ಎರಡು ಕಂಚಿನ ಪದಕ, ರಯ್ಯಾನ್ ಚಿನ್ನ ಪದಕ ಮತ್ತು ಕಂಚಿನ ಪದಕ ಪಡೆದಿದ್ದಾರೆ.
ಬ್ಲೂ್ಯ ಬೆಲ್ಟ್ ವಿಭಾಗದಲ್ಲಿ ಮನಿಷಾ ನಾಯ್ಕ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರೆ, ಗ್ರೀನ್ ಬೆಲ್ಟ್ ವಿಭಾಗದಲ್ಲಿ ರತನ್ ಪಾವಸ್ಕರ್ ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ. ಬ್ರೌನ್ ಬೆಲ್ಟ್ ವಿಭಾಗದಲ್ಲಿ ಸಾನ್ವಿ ನಾಯ್ಕ ಚಿನ್ನ ಮತ್ತು ಬೆಳ್ಳಿ ಪದಕ, ಯಶಸ್ ಮೊಗೇರ ಚಿನ್ನದ ಪದಕ ಪಡೆದಿದ್ದಾರೆ. ಈಶ್ವರ ನಾಯ್್ಕ ಮತ್ತು ನಾಗಶ್ರೀ ನಾಯ್ಕ ಅವರು ತರಬೇತಿ ನೀಡಿದ್ದರು.