ಬಂಟ್ವಾಳ: ಪ್ರಾಥಮಿಕ ಶಾಲೆಗಳು ಶಿಸ್ತನ್ನು ಕಲಿಸುವ ಮೂಲಕ ಮಕ್ಕಳಲ್ಲಿ ಸಾಧನೆಜಛಿ ದಾರಿ ತೋರಿಸುತ್ತವೆ. ಶಿಸ್ತಿನಿಂದ ಸಾಧನೆ ಸಾಧ್ಯ, ಪಾಲಕರು ಖಾಸಗಿ ಶಾಲೆಗಳಿಗೆ ತೋರುವ ಆಸಕ್ತಿ ಸರ್ಕಾರಿ ಶಾಲೆಗಳಿಗೂ ತೋರಿಸಬೇಕು ಎಂದು ಬಂಟ್ವಾಳ ಸಂಚಾರಿ ಠಾಣಾ ಪೊಲೀಸ್ ಉಪ ನಿರೀಕ್ಷಕ ಸುತೇಶ್ ಕೆ.ಪಿ.ಹೇಳಿದರು.
ಶನಿವಾರ ಬಂಟ್ವಾಳ ತಾಲೂಕಿನ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿಕ್ಷಣ ಇಲಾಖೆ ವತಿಯಿಂದ ಪೂರ್ವ ಪ್ರಾಥಮಿಕ ತರಗತಿ ಮಕ್ಕಳಿಗೆ ನಿರ್ಮಿಸಿದ ಪ್ಲೇ ಏರಿಯಾವನ್ನು ಉದ್ಘಾಟಿಸಿ ಮಾತನಾಡಿದರು.
ವಾರ್ಷಿಕೋತ್ಸವದ ನಿಮಿತ್ತ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನರಿಕೊಂಬು ಗ್ರಾಪಂ ಉಪಾಧ್ಯಕ್ಷೆ ಮೋಹಿನಿ, ಪಿಡಿಒ ಹರೀಶ್ ಕೆ.ಎ., ಗ್ರಾಮಲೆಕ್ಕಿಗ ಅಥಿಕ್ ಪೂಜಾರಿ, ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಪ್ರಸಾದ್ ರೈ, ಉದ್ಯಮಿ ರಾಜೇಶ್ ಸುವರ್ಣ, ಧರ್ಮಸ್ಥಳ ಯೋಜನೆ ಮೇಲ್ವಿಚಾರಕಿ ಮಮತಾ ಸಂತೋಷ್, ಸೇವಾ ಪ್ರತಿನಿಧಿ ಪ್ರತಿಭಾ ವಸಂತ್, ಉದ್ಯಮಿ ಅಲ್ಬರ್ಟ್ ಮಿನೇಜೆಸ್, ರಾಜ್ಯ ಸರ್ಕಾರಿ ನೌಕರರ ಸಂಘ ಬಂಟ್ವಾಳ ಕಾರ್ಯದರ್ಶಿ ಸಂತೋಷ್ ಕುಮಾರ್, ಗುತ್ತಿಗೆದಾರ ಪಿ.ಎಸ್.ಅಬ್ದುಲ್ ಲತೀಫ್, ಶಂಭೂರ್ ಶಾಲಾ ನಿವೃತ್ತ ಶಿಕ್ಷಕ ಶಂಕರನಾರಾಯಣ ರಾವ್, ವಿಜಯಲಕ್ಷ್ಮೀ ಯುವಕ ಸಂಘ ನರಿಕೊಂಬು ಅಧ್ಯಕ್ಷ ಹರೀಶ್ ಟೈಲರ್, ವೀರಮಾರುತಿ ವ್ಯಾಯಾಮ ಶಾಲೆ ಮಾರುತಿ ನಗರ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.
ಶಿಕ್ಷಕ ಓಂ ಪ್ರಕಾಶ್ ಮಾರ್ಗದರ್ಶನದಲ್ಲಿ ಮಕ್ಕಳಿಂದ ಶಶಿ ಪ್ರಭಾ ಪರಿಣಯ ಯಕ್ಷಗಾನ ಪ್ರಸಂಗ ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ನರಿಕೊಂಬು ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ, ಸಾಧಕ ಹಿರಿಯ ವಿದ್ಯಾರ್ಥಿಗಳಾದ ಅನಂತೇಶ್ ಎಲ್., ದೀಕ್ಷಿತಾ ಬೋರುಗುಡ್ಡೆ, ಕವನಾ ಪೈ ಅವರನ್ನು ಗೌರವಿಸಲಾಯಿತು.
ನರಿಕೊಂಬು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಸ್ವಾಗತಿಸಿದರು. ಪ್ರಭಾರ ಮುಖ್ಯಶಿಕ್ಷಕಿ ಸುಜಾತಾ ಎ.ಎಸ್.ವರದಿ ವಾಚಿಸಿ, ಸಹಶಿಕ್ಷಕಿ ದಿವ್ಯಶ್ರೀ ವಂದಿಸಿದರು. ವಿಲ್ಮಾ ಪ್ರೆಸಿಲ್ಲಾ ಪಿಂಟೋ ನಿರೂಪಿಸಿದರು.