ಜಿಲ್ಲೆ

ಸಾಧನೆ ಹಿಂದಿರುವ ಪ್ರೇರಕ ಶಕ್ತಿ ಗುರು

ತಲ್ಲೂರ: ಗುರು&ಶಿಷ್ಯರ ಸಂಬಂಧ ಅನ್ಯೋನ್ಯವಾಗಿದ್ದು, ಗುರುವಿನ ನೇರ ನೆರವಿಲ್ಲದೆ ಸಾಧನೆ ಬೇಗ ಮಾಡಲಾಗುವುದಿಲ್ಲ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಂದ್ರ ಸ್ವಾಮೀಜಿ ಹೇಳಿದರು.

ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 2002&03ನೇ ಸಾಲಿನ ವಿದ್ಯಾರ್ಥಿಗಳು ಈಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಗುರುವಿನ ಸ್ಥಾನ ದೊಡ್ಡದು. ಗುರುವಿನ ಋಣ ತೀರಿಸುವುದು ಕಷ್ಟ. ಅಸಾಧ್ಯವಾಗಿರುವುದನ್ನು ಸಾಧಿಸುವ ಶಕ್ತಿ ಗುರುವಿಗಿದೆ ಎಂದರು.

ನಿವೃತ್ತ ಮುಖ್ಯಶಿಕ ಬಿ.ವಿ.ಲಕ್ಕನ್ನವರ ಮಾತನಾಡಿ, ನಮ್ಮ ಶಿಷ್ಯರು ಸಾಧನೆ ಮಾಡಿ ಗುರಿ ಮುಟ್ಟಿದಾಗ ನಮಗಾಗುವ ಸಂತೋಷ ವಿವರಿಸಲಾಗದು ಎಂದರು.

ನಿವತ್ತ ಮುಖ್ಯಶಿಕ ಜಿ.ಎಂ.ಯರಗಟ್ಟಿ ಮಾತನಾಡಿ, ಗುರು&ಶಿಷ್ಯರ ಪರಂಪರೆ ಅವಿನಾಭಾವದಿಂದಿರುತ್ತದೆ. ನಾಲ್ಕರ ಕಲಿಸಿದ ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಗಳು ಹಾಗೂ ಶಿಕರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು. ಎಸ್​ಡಿಎಂಸಿ ಅಧ್ಯ ಸೋಮಪ್ಪ ತಲ್ಲೂರ ಅಧ್ಯತೆ ವಹಿಸಿದ್ದರು. ಗ್ರಾಪಂ ಅಧ್ಯೆ ಪ್ರೇಮಾ ಢಮ್ಮಣಗಿ, ಉಪಾಧ್ಯೆ ಎಸ್​.ಎಂ.ಮಾದರ, ಗ್ರಾಪಂ ಸದಸ್ಯ ಕೀರಪ್ಪ ಸಣಗೌಡ್ರ, ಎಂ.ಡಿ.ದೊಡಮನಿ, ಯು.ಯು.ತೋಟಗಿ, ಪಿಡಿಒ ಎಚ್​.ಕೆ.ಚೌರಡ್ಡಿ, ಎ್​.ವೆ.ಸಣಗೌಡ್ರ, ಅಶೋಕ ಚಿಕ್ಕೊಪ್ಪ, ಜಿ.ಜಿ.ಆಡಿನ, ಸುರೇಶ ಮುಗಳಿ, ಕೀರವ್ವ ಪವಾಡೆಪ್ಪನವರ, ಪೂರ್ಣಿಮಾ ಪತ್ರಿಗಿಡದ, ಶ್ರೀಕಾಂತ ಹಿರೇಮಠ, ಗೌಡಪ್ಪ ಸಣಗೌಡರ, ಬಸವರಾಜ ಯರಗಟ್ಟಿ, ಚನ್ನಬಸವ್ವ ಸಣಗೌಡ್ರ, ಸವಿತಾ ಯರಝರ್ವಿ, ಶಿವಪ್ಪ ಚವಡಪ್ಪನವರ, ಕೀರಪ್ಪ ಗುರನಗೌಡ್ರ, ಬಸವರಾಜ ತಳವಾರ,

ಯು.ಎಸ್​.ಬಿರಾದಾರಪಾಟೀಲ, ಕೆ.ವಿ.ಭೋವಿ, ಬಿ.ಎಚ್​.ದಿಲಾವರ್​, ಪಿ.ಎಸ್​.ಮಠಪತಿ, ಎಂ.ಬಿ.ಸಸಾಲಟ್ಟಿ, ಎಂ.ವಿ.ಬಡಿಗೇರ,

ಎಸ್​.ಬಿ.ಚವಡಪ್ಪನವರ, ಯು.ಎಲ್​.ಜರಗು ಇತರರಿದ್ದರು.