ಹುಬ್ಬಳ್ಳಿ : ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ವೇದಪೀಠದ ಅಧ್ಯಕ್ಷ ಡಾ. ಕಂಠಪಲ್ಲೀ ಆಚಾರ್ಯರು ನಗರದ ವಿವಿಧ ಬಡಾವಣೆಗಳ ಭಕ್ತರ ನಿವಾಸಗಳಲ್ಲಿ ಸೆ. 16 ರಿಂದ 29ರವರೆಗೆ ಬೆಳಗ್ಗೆ 7.30 ರಿಂದ 8.30ರವರೆಗೆ ಭಾಗವತ ದೀಪೋತ್ಸವ ನಡೆಸಿಕೊಡಲಿದ್ದಾರೆ.
ಶ್ರೀಮದ್ಭಾಗವತೋಪದೇಶದ ಮೂಲಕ ಅರಿಷ್ಟನಿವೃತ್ತಿ ಮತ್ತು ಇಷ್ಟಪ್ರಾಪ್ತಿ ಎಂಬ ಎರಡು ನಂದಾದೀಪಗಳನ್ನು ಬೆಳಗಿಸುವುದರೊಂದಿಗೆ ಶ್ರೀ-ಭೂ ಸಹಿತ ಶ್ರೀ ವೆಂಕಟೇಶ್ವರ ದೇವರ ಸನ್ನಿಧಾನದಲ್ಲಿ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
16ರಂದು ಇಟಗಿ ಮಾರುತಿ ದೇವಾಲಯದಲ್ಲಿ ಆರಂಭವಾಗುವ ಈ ಉತ್ಸವವು ಕಂಠಪಲ್ಲೀ ವೇದಪೀಠ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಸಿಂಹಗೀತಾ ಪ್ರತಿಷ್ಠಾನಂ ಟ್ರಸ್ಟ್ ಸಹಯೋಗದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.