ಜಿಲ್ಲೆ

ಖಾನಾಪುರದಲ್ಲಿ ರಸ್ತೆ ಅಪಘಾತ; ಆರು ಜನರು ಸಾವು!

ಮಂಜುನಾಥ ಕೋಳಿಗುಡ್ಡ


ಖಾನಾಪುರ: ತಾಲೂಕಿನ ಮಂಗ್ಯಾನಕೊಪ್ಪ  ಗ್ರಾಮದ ಬಳಿ ಗುರುವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,  ಓರ್ವ ಮಹಿಳೆ ಸೇರಿ ಆರು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಒಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಖಾನಾಪುರ ಲೂಕಿನ ಗುಳ್ಳಳ್ಳಿ ಗ್ರಾಮಕ್ಕೆ ಮದುವೆಗಾಗಿ ಧಾರವಾಡದಿಂದ ಕಿತ್ತೂರು ಮಾರ್ಗವಾಗಿ ಕಾರಿನಲ್ಲಿ ಹೊರಟಿದ್ದರು, ಚಾಲಕನ ನಿಯಂತ್ರಣ ತಪ್ಪಿ ಕಾರು ನೇರವಾಗಿ ಮರಕ್ಕೆ ಅಪ್ಪಳಿಸಿದೆ. ಅಪ್ಪಳಿಸಿದ ರಭಸಕ್ಕೆ ವಾಹನ ಚಾಲಕ ಮತ್ತೊಬ್ಬನ ದೇಹಗಳು ಛದ್ರಗೊಂಡಿವೆ. ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.  ಮೃತರೆಲ್ಲರೂ ಧಾರವಾಡ ಮೂಲದವರು ಎಂದು ತಿಳಿದು ಬಂದಿದೆ. ಎಸ್ಪಿ ಡಾ.ಭೀಮಾಶಂಕರ ಗುಳೇದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.