ಜಿಲ್ಲೆ

ತುಳು ಚಿತ್ರನಟನ ಕೊಲೆ ಪ್ರಕರಣ; ಆರೋಪಿಗಳಿಬ್ಬರ ಬಂಧನ

Bellari - Heera Nayak

ಮಂಗಳೂರು: ತುಳು ಚಿತ್ರರಂಗದ ನಟ ಸುರೇಂದ್ರ ಬಂಟ್ವಾಳ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಟ್ವಾಳದ ಸತೀಶ್ ಕುಲಾಲ್, ಕಿನ್ನಿಗೋಳಿಯ ಗಿರೀಶ್ ಬಂಧಿತರು.

ಕೊಲೆ ಆರೋಪಿಗಳು ಶನಿವಾರ ತಡರಾತ್ರಿ ಕಾಸರಗೋಡು ಕಡೆಯಿಂದ ಬಾಡಿಗೆ ಕಾರಿನಲ್ಲಿ ಬರುತ್ತಿದ್ದಾಗ ಡಿವೈಎಸ್​ಪಿ ವೆಲೆಂಟೈನ್ ಡಿಸೋಜಾ ನೇತೃತ್ವದ ತಂಡ ಕಾರನ್ನು ತಡೆದು ಆರೋಪಿಗಳನ್ನು ಬಂಧಿಸಿದೆ.

ನಟ ಸುರೇಂದ್ರ ಅವರನ್ನು ಅ.20ರಂದು ಬಿ.ಸಿ.ರೋಡ್​​ನಲ್ಲಿರುವ ಫ್ಲ್ಯಾಟ್​ನಲ್ಲಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣ ಅ.21ರಂದು ಮಧ್ಯಾಹ್ನ ಬೆಳಕಿಗೆ ಬಂದಿತ್ತು.