ಅರಕಲಗೂಡು ತಾಲೂಕಿನ ಸಂತೆಮರೂರು ರಸ್ತೆಯಲ್ಲಿ ಶುಕ್ರವಾರ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಉಪ ನಿರೀಕ್ಷಕಿ ಆರ್.ಪದ್ಮಾ ಹಾಗೂ ಸಿಬ್ಬಂದಿ ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ.  
ಜಿಲ್ಲೆ

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿ ಬಂಧನ

ಅರಕಲಗೂಡು: ತಾಲೂಕಿನ ಸಂತೆಮರೂರು ಬಳಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು, 1.48 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.

ಹಾಸನ ತಾಲೂಕಿನ ಉಡುವಾರೆ ಗ್ರಾಮದ ರೇವಂತ್ ಎಂಬಾತ ಸಂತೆಮರೂರು-ಮರಿತಮ್ಮನಹಳ್ಳಿ ರಸ್ತೆಯಲ್ಲಿ ವಾಹನದಲ್ಲಿ ಮದ್ಯ ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ಶುಕ್ರವಾರ ಗಸ್ತಿನಲ್ಲಿದ್ದ ಅಬಕಾರಿ ನಿರೀಕ್ಷಿ ಆರ್.ಪದ್ಮಾ ಸಿಬ್ಬಂದಿಯೊಂದಿಗೆ ವಾಹನ ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದು ಕಂಡುಬಂದಿದೆ. 90 ಮಿಲಿಯ ಒರಿಜಿನಲ್ ಚಾಯ್ಸ, ಡಿಲಕ್ಸ್ ವಿಸ್ಕಿ 13 ಬಾಕ್ಸ್‌ಗಳು ಒಟ್ಟು 112.32 ಲೀಟರ್ ಮದ್ಯ ಮತ್ತು ಬಿಯರ್ ಮಾರಾಟಕ್ಕಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ವಾಹನ ಸಮೇತ ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.