ಜಿಲ್ಲೆ

ಅಂತರ್‌ಜಿಲ್ಲಾ ಕಳ್ಳನ ಬಂಧನ

ಹರಿಹರ: ಹಗಲು ಮನೆಗಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳತನದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾಲಿ ವಾಸ ಶಿವಮೊಗ್ಗದ ವಿನೋಬಾನಗರ ನಿವಾಸಿ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕುಪ್ಪನಕೆರೆ ಗ್ರಾಮದ ಗೌತಂರಾಜ್ ಬಂಧಿತ ಆರೋಪಿ. ಆರೋಪಿಯಿಂದ ರೂ.1.67 ಮೌಲ್ಯದ 26.83 ಗ್ರಾಂ ಬಂಗಾರ ಹಾಗೂ ರೂ.2,450 ಮೌಲ್ಯದ 46.2 ಗ್ರಾಂ ಬೆಳ್ಳಿ ಆಭರಣ ವಶಪಡಿಸಿಕೊಂಡಿದೆ.

ಆ.4ರಂದು ನಗರದ ವಿದ್ಯಾನಗರ ಸಿ ಬ್ಲಾಕ್‌ನ ಮನೆಯಲ್ಲಿ ಕಳ್ಳತನ ಮಾಡಿರುವ ಕುರಿತು ದೂರು ದಾಖಲಿಸಿಕೊಳ್ಳಲಾಗಿತ್ತು.

ಗ್ರಾಮಾಂತರ ಡಿವೈಎಸ್‌ಪಿ ಬಸವರಾಜ್ ಬಿ.ಎಸ್. ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪಿಐ ದೇವಾನಂದ ನೇತೃತ್ವದಲ್ಲಿ ಪಿಎಸ್‌ಐಗಳಾದ ಜಿ.ಎಸ್. ವಿಜಯ್, ಶ್ರೀಪತಿ ಗಿನ್ನಿ, ಸಿಬ್ಬಂದಿ ನಾಗರಾಜ ಸುಣಗಾರ, ಸಿದ್ದೇಶ್ ಎಚ್., ರವಿ ಆರ್., ರುದ್ರಸ್ವಾಮಿ ಕೆ.ಸಿ., ಹನುಮಂತಪ್ಪ ಗೋಪನಾಳ, ಹೇಮಾನಾಯ್ಕ, ಸತೀಶ ಟಿ.ವಿ., ಚಾಲಕ ರಂಗನಾಥ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ಪಿಐ ಇಸ್ಮಾಯಿಲ್, ಪಿಎಸ್‌ಐ ಮಂಜುನಾಥ ಕಲ್ಲೆದೇವರು, ಸಿಬ್ಬಂದಿ ಅಖ್ತರ್ ಎಸ್.ಎಂ., ನಾಗರಾಜ ಕುಂಬಾರ್, ವೀರೇಶ ವಿ., ರಾಘವೇಂದ್ರ, ಶಾಂತರಾಜ್ ಕಾರ್ಯಾಚರಣೆ ನಡೆಸಿದ್ದರು.