ಮಡಿಕೇರಿ:
ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರಿಂದ ಮೂಲ ನಿವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿರುವ ಜಬ್ಬೂಮಿ ಸಂಘಟನೆಯ ಸಂಚಾಲಕ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ, ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿನಲ್ಲಿ ಪ್ರವಾಸಿಗರ ದೌರ್ಜನ್ಯ ಮಿತಿ ಮೀರುತ್ತಿದೆ, ಇದಕ್ಕೆ ರಾಜಕೀಯ ಮತ್ತು ಕೋಮು ಬಣ್ಣ ಬಳಿಯಲಾಗುತ್ತಿದೆ. ವಿನಾಕಾರಣ ಮಹಿಳಾ ದೌರ್ಜನ್ಯದ ಆರೋಪ ಹೊರಿಸಿ ಸ್ಥಳೀಯ ಮೂಲ ನಿವಾಸಿಗಳ ಆತ್ಮಸ್ಥೆöÊರ್ಯ ಕುಗ್ಗಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಕೊಡಗಿನ ಮಾದಾಪುರ ಸಮೀಪದ ಕೋಟೆಬೆಟ್ಟದ ತಪ್ಪಲಿನಲ್ಲಿ ಇತ್ತೀಚೆಗೆ ಕ್ಷುಲ್ಲಕ ವಿಚಾರಕ್ಕೆ ಕಲಹ ನಡೆದಿದೆ. ಇದಕ್ಕೆ ಮೊದಲಿಗೆ ರಾಜಕೀಯ ಬಣ್ಣ ಬಳಿಯಲು ಯತ್ನಿಸಿದ್ದು, ನಂತರ ಸ್ಥಳೀಯರಿಂದ ಸರಗಳ್ಳತನ ಎಂದು ಬಿಂಬಿಸಿ, ವೀಡಿಯೋ ಮತ್ತು ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ.
ಸ್ಥಳೀಯರು ವಾಸ್ತವಾಂಶದ ವಿವರವನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ ನಂತರ, ಪೊಲೀಸ್ ಇಲಾಖೆ ಸರಗಳ್ಳತನದ ಆರೋಪವನ್ನು ನಿರಾಕರಿಸಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತು. ವಾಹನಕ್ಕೆ ದಾರಿ ಕೊಡುವ ವಿಚಾರದಲ್ಲಿ ನಡೆದ ಕಲಹ ಮತ್ತು ಈ ಸಂದರ್ಭ ತಡೆಯಲು ಹೋದ ಯುವತಿಯ ಸರ ಬಿದ್ದು ಹೋಗಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿತ್ತು.
ಆದರೆ ಇದೀಗ ಪೋಲೀಸರು ಮಹಿಳಾ ದೌರ್ಜನ್ಯದಡಿ ಪ್ರಕರಣ ದಾಖಲಿಸಿರುವ ಕುರಿತು ಮಾಹಿತಿ ಲಭಿಸಿದೆ. ಇಂದು ಮುಂಜಾನೆ ಸ್ಥಳೀಯ ಯುವಕರ ಮನೆಗೆ ತೆರಳಿದ ಪೊಲೀಸರು ಯುವಕರನ್ನು ಹುಡುಕಾಡಿದ್ದಾರೆ. ಕುಟುಂಬಸ್ಥರಲ್ಲಿ ಹಾಗೂ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ರಾಜೀವ್ ಬೋಪಯ್ಯ ಆರೋಪಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಕ್ಷÄಲ್ಲಕ ವಿಚಾರದ ಕಲಹವೆಂದು ಸ್ಪಷ್ಟೀಕರಣ ನೀಡಿದ ನಂತರವೂ ಮಹಿಳಾ ದೌರ್ಜನ್ಯದ ಪ್ರಕರಣ ಯಾವ ಕಾರಣಕ್ಕೆ ದಾಖಲಾಗಿದೆ ಎನ್ನುವ ಬಗ್ಗೆ ಪೊಲೀಸ್ ಇಲಾಖೆ ತಿಳಿಸಬೇಕು. ಅಲ್ಲದೆ ಇದೇ ಘಟನೆಗೆ ಸಂಬAಧಿದAತೆ ವ್ಯಕ್ತಿಯೊಬ್ಬ ವೀಡಿಯೋ ಮೂಲಕ ಸ್ಥಳೀಯ ಯುವಕರಿಬ್ಬರಿಗೆ ಬೆದರಿಕೆ ಹಾಕಿದ್ದಾನೆ. ಈ ಬೆಳವಣಿಗೆಗಳಿಂದ ಆತಂಕ ಮೂಡಿದ್ದು, ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸೂಕ್ತ ತನಿಖೆ ನಡೆಸಬೇಕು. ಆ ಮೂಲಕ ಮೂಲನಿವಾಸಿಗಳ ಆತ್ಮವಿಶ್ವಾಸ ಹೆಚ್ಚಿಸಬೇಕು. ವೀಡಿಯೋದಲ್ಲಿ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೋಜು ಮಸ್ತಿಯ ಹೆಸರಿನಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರಿಂದ ನಿಯಮ ಬಾಹಿರ ಚಟುವಟಿಕೆಗಳು ಮತ್ತು ಕೊಡಗಿನ ಪರಿಸರಕ್ಕೆ ಮಾರಕವಾಗುವ ಕಾರ್ಯಗಳು ನಡೆಯುತ್ತಿದೆ. ಇದರ ವಿರುದ್ಧ ಸಂಬAಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟಿತ ಹೋರಾಟ ಅನಿವಾರ್ಯವಾಗುತ್ತದೆ ಎಂದು ರಾಜೀವ್ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.