ಜಿಲ್ಲೆ

ಪಾರ್ಕ್​ ಜಾಗದಲ್ಲಿ ಲೇಔಟ್​! 8 ಎಫ್​ಐಆರ್​ಗಳ ಆರೋಪಿಯ ಬಂಧನ

ಬೆಂಗಳೂರು: ಹತ್ತಾರು ಜನರಿಗೆ ವಂಚಿಸಿದ ಆರೋಪ ಹೊತ್ತಿರುವ ಕರ್ನಾಟಕ ಸ್ಟೇಟ್ ಡಿ ಗ್ರೂಪ್ ನೌಕರರ ಅಸೋಸಿಯೇಷನ್ ಅಧ್ಯಕ್ಷ ಬಿ.ಎಂ.ನಟರಾಜ್​​ನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಬಂಧಿತ ನಟರಾಜ್ ಸರ್ವೆ ನಂಬರ್, ಷಡ್ಯೂಲ್ ಬದಲಾಯಿಸಿ ಜಾಗ ಮಾರಾಟ ಮಾಡುತ್ತಿದ್ದ. ಪಾರ್ಕ್ ಜಾಗವನ್ನೂ ಸಹ ಲೇಔಟ್ ಮಾಡಿ ಮಾರಾಟ ಮಾಡಿದ್ದ. ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಮೂರು ಎಫ್ ಐ ಆರ್ ದಾಖಲಾಗಿತ್ತು. ಈಗ ಮತ್ತೆ 5 ಎಫ್​​ಐಆರ್ ದಾಖಲಾಗಿವೆ. ಹಾಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಟರಾಜ್​​ನನ್ನು ಬಂಧಿಸಿದ್ದಾರೆ.